ಎಲ್ಲರ ಅಭಿವೃದ್ಧಿಗೆ ಕೆಲಸ: ಹೇಮಾ ಮಾಲಿನಿ

ಬುಧವಾರ, ಏಪ್ರಿಲ್ 24, 2019
32 °C

ಎಲ್ಲರ ಅಭಿವೃದ್ಧಿಗೆ ಕೆಲಸ: ಹೇಮಾ ಮಾಲಿನಿ

Published:
Updated:

ನವದೆಹಲಿ: ಬಿಜೆಪಿ ಮುಸ್ಲೀಂ ಸಮುದಾಯ ಸೇರಿದಂತೆ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

ಮೋದಿ ಸರಕಾರ ತ್ರಿವಳಿ ತಲಾಖ್‌ಅನ್ನು ವಿರೋಧಿಸಿ ಸುಗ್ರೀವಾಜ್ಞೆ ಹೊರಡಿಸಿರುವುದು ಮುಸ್ಲೀಂ ಸಮುದಾಯದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು. ಸರಕಾರದ ಈ ನಿಲುವನ್ನು ಮುಸ್ಲೀಂ ಸಮುದಾಯದ ಮಹಿಳೆಯರು ಸ್ವಾಗತಿಸಿದ್ದಾರೆ ಎಂದು ಶನಿವಾರ ಮಥುರಾದ ಸಂಸದೆ ಹೇಮ ಮಾಲಿನಿ ವಿವರಿಸಿದರು.

ಮಥುರಾ ಕ್ಷೇತ್ರದಿಂದ ಪುನರ್‌ ಆಯ್ಕೆಯನ್ನ ಬಯಸುತ್ತಿರುವ ಹೇಮಾ ಮಾಲಿನಿ ಮೋದಿ ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಜನ ಮತ ಹಾಕುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

‘ಮುಸ್ಲಿಮರು ನನಗೇ ಮತ ಹಾಕಬೇಕು. ಏಕೆಂದರೆ ನೀವು ನಾಳೆ ಯಾವುದಾದರೂ ಕೆಲಸಕ್ಕೆಂದು ನನ್ನ ಬಳಿ ಬರಬೇಕಾಗುತ್ತದೆ’ ಎಂದು ಸುಲ್ತಾನ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಗುರುವಾರ ಹೇಳಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !