ಸಂವಿಧಾನ ಉಳಿಸಲು ಬಿಎಸ್ಪಿಗೆ ಮತ ಕೊಡಿ: ಪರಶುರಾಮ ಮಹಾರಾಜನವರ

ಶುಕ್ರವಾರ, ಏಪ್ರಿಲ್ 26, 2019
21 °C

ಸಂವಿಧಾನ ಉಳಿಸಲು ಬಿಎಸ್ಪಿಗೆ ಮತ ಕೊಡಿ: ಪರಶುರಾಮ ಮಹಾರಾಜನವರ

Published:
Updated:

ಬಾಗಲಕೋಟೆ: ‘ದೇಶದ ಸಂವಿಧಾನವೇ ಬಹುಜನ ಸಮಾಜ ಪಕ್ಷದ ಪ್ರಣಾಳಿಕೆಯಾಗಿದೆ. ಅದರ ಆಶಯಗಳನ್ನು ಯಥಾವತ್ ಜಾರಿಗೊಳಿಸಲು ರಾಜಕೀಯ ಅಧಿಕಾರ ಕೇಳುತ್ತಿದ್ದೇವೆಯೇ ಹೊರತು, ಬೇರೆ ಯಾರನ್ನೋ ಗೆಲ್ಲಿಸಬೇಕು ಎನ್ನುವ ದೃಷ್ಟಿಯಿಂದ ಚುನಾವಣೆ ಮಾಡುತ್ತಿಲ್ಲ’ ಎಂದು ಪಕ್ಷದ ಮುಖಂಡ ಪರಶುರಾಮ ಮಹಾರಾಜನವರ ಹೇಳಿದರು.

ಬಿಜೆಪಿಗರು ಸಂವಿಧಾನವನ್ನು ತಿದ್ದುಪಡಿ ಮಾಡಲು ಮುಂದಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು ಜನರು ಬಿಎಸ್‌ಪಿಗೆ ಮತ ನೀಡಬೇಕು ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆದರೆ ಅದರಲ್ಲಿನ ಯಾವ ಭರವಸೆಯನ್ನು ಕೂಡಾ ಈಡೇರಿಸುವುದಿಲ್ಲ, ಅವು ಕೇವಲ ಕಾಗದಕ್ಕೆ ಸೀಮಿತವಾಗಿವೆ. ಸುಳ್ಳು ಭರವಸೆಗಳ ನೀಡುವುದಕ್ಕಿಂತ ದೇಶದ ಸಂವಿಧಾನವನ್ನೇ ಸಂಪೂರ್ಣವಾಗಿ ಜಾರಿಗೆ ತಂದರೆ ದೇಶದ ಅಭಿವೃದ್ಧಿ ಸಾಧ್ಯ’ ಎಂದರು.

‘ಬಿಎಸ್‌ಪಿ ಒಂದು ಪಕ್ಷವಾಗಿರುವ ಜೊತೆಗೆ ಒಂದು ಸಂಘಟನೆ ಕೂಡಾ ಆಗಿದೆ. ಈ ಸಂಘಟನೆಯಿಂದ ಸಾಮಾಜಿಕ ಕೆಲಸಗಳನ್ನು ಮಾಡಲು ಅಧಿಕಾರ ಬೇಕಾಗಿದೆ. ಅದಕ್ಕಾಗಿ ಚುನಾವಣೆ ಎದುರಿಸುತ್ತಿದ್ದೇವೆ ’ ಎಂದರು.

‘ಬಿಎಸ್‌ಪಿ ನಾಯಕಿ ಮಯಾವತಿ ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ಪ್ರಧಾನಿಯಾಗಬೇಕಾದರೆ ಬಾಗಲಕೋಟೆಯಿಂದ ಸ್ಪರ್ಧಿಸಿರುವ ಬಿಎಸ್‌ಪಿ ಅಭ್ಯರ್ಥಿ ಮೊಹಮ್ಮದ್‌ ಹುಸೇನ್ ಮುಜಾವರ್ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ, ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಎರಡು ಸ್ಥಾನಗಳಿಗೆ ಬೆಂಬಲಿಸಲಿದೆ. ಈ ಮೈತ್ರಿಗೆ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಬರಲಿವೆ’ ಎಂದರು.

ಬಾಗಲಕೋಟೆ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಮಹಮ್ಮದ್ ಹುಸೇನ್ ಮುಜಾವರ್, ಮುಖಂಡರಾದ ಯಲ್ಲಪ್ಪ ಸನಕ್ಯಾನವರ, ಪ್ರಭಾಕರ ಚಲವಾದಿ, ಮೊಹಮ್ಮದ್ ಉಮರ್ ನೀಲನಾಯಕ, ಅರುಣ ಗರಸಂಗಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !