ಒತ್ತುವರಿಗೆ ಕಡಿವಾಣ ಇಲ್ಲ

ಗುರುವಾರ , ಏಪ್ರಿಲ್ 25, 2019
31 °C

ಒತ್ತುವರಿಗೆ ಕಡಿವಾಣ ಇಲ್ಲ

Published:
Updated:

ಮಂಗಳೂರು: ನಗರದಲ್ಲಿರುವ ರಸ್ತೆಗಳ ಒಟ್ಟು ಉದ್ದದ ಶೇಕಡ 20ರಷ್ಟು ಮಾತ್ರ ಪಾದಚಾರಿ ಮಾರ್ಗವಿದೆ. ಅದರಲ್ಲಿ ಸುಸಜ್ಜಿತವಾದ ಪಾದಚಾರಿ ಮಾರ್ಗವಿರುವುದು ಕೆಲವೇ ರಸ್ತೆಗಳಲ್ಲಿ. ಅದನ್ನೂ ವ್ಯಾಪಾರಿಗಳು, ಹೋಟೆಲ್‌, ವಾಣಿಜ್ಯ ಕಟ್ಟಡದವರು ಅತಿಕ್ರಮಿಸಿಕೊಂಡರೆ ಬಡಪಾಯಿ ಪಾದಚಾರಿಗಳ ಹಕ್ಕು ರಕ್ಷಿಸುವವರು ಯಾರು?

ನಗರದಲ್ಲಿ ಹೆಚ್ಚಿನ ಪ್ರಮಾಣದ ವಾಣಿಜ್ಯ ವಹಿವಾಟು ನಡೆಯುವ ಕೆಲವು ಪ್ರದೇಶಗಳಲ್ಲಿ ಒಂದಷ್ಟು ಸುಸಜ್ಜಿತವಾದ ಪಾದಚಾರಿ ಮಾರ್ಗಗಳಿವೆ. ಅಲ್ಲಿನ ಬಹುತೇಕ ಅಂಗಡಿ ಮಳಿಗೆಯವರು ಪಾದಚಾರಿ ಮಾರ್ಗಗಳನ್ನೂ ತಮ್ಮ ವ್ಯಾಪಾರ, ವಹಿವಾಟಿಗಾಗಿ ಆಕ್ರಮಿಸಿಕೊಂಡಿದ್ದಾರೆ. ಕೆಲವರು ಮಡಿಸಿಡಬಹುದಾದ ಚಾವಣಿಗಳನ್ನೂ ಅಳವಡಿಸಿಕೊಂಡು ಭರ್ಜರಿ ಲಾಭ ಗಿಟ್ಟಿಸುತ್ತಿದ್ದಾರೆ.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡುವ ಹೊಣೆಗಾರಿಕೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ವಿಭಾಗದ ಪೊಲೀಸರಿಗೆ ಇದೆ. ಆದರೆ, ಆಗಾಗ ಸಣ್ಣಪುಟ್ಟ ವ್ಯಾಪಾರಿಗಳ ಗೂಡಂಗಡಿಗಳನ್ನು ಹೊತ್ತೊಯ್ಯುವುದಕ್ಕೆ ಇವರ ಕಾರ್ಯಾಚರಣೆ ಸೀಮಿತವಾಗುತ್ತದೆ.

ಕೆಲವೆಡೆ ಪಾದಚಾರಿ ಮಾರ್ಗಗಳು ಮಾಲ್‌ಗಳಿಗೆ, ದೊಡ್ಡ ವಾಣಿಜ್ಯ ಸಂಕೀರ್ಣಗಳಿಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ಬಳಕೆಯಾಗುತ್ತಿವೆ. ಹಲವು ವಾಣಿಜ್ಯ ಮಳಿಗೆಗಳ ಮಾಲೀಕರು ಎದುರಿನ ಪಾದಚಾರಿ ಮಾರ್ಗದ ಎದುರಿನಲ್ಲಿ ತಮ್ಮ ಗ್ರಾಹಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಗ್ರಾಹಕರ ವಾಹನಗಳಿಗೆ ಮೀಸಲು’ ಎಂಬ ಫಲಕಗಳನ್ನೂ ಇರಿಸಿಕೊಂಡು ಪಾದಚಾರಿಗಳ ಹಕ್ಕನ್ನು ಕಸಿಯುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರು ವಾರಕ್ಕೊಮ್ಮೆ ನಡೆಸುವ ನೇರ ಫೋನ್‌ ಕಾರ್ಯಕ್ರಮಕ್ಕೆ ನಗರದಲ್ಲಿನ ಪಾದಚಾರಿ ಮಾರ್ಗಗಳ ಅತಿಕ್ರಮಣ ಕುರಿತು ಪ್ರತಿ ಬಾರಿಯೂ ದೂರುಗಳು ಬರುತ್ತವೆ. ಆದರೆ, ಪಾದಚಾರಿಗಳ ಗೋಳು ಮಾತ್ರ ಯಥಾವತ್ತಾಗಿಯೇ ಉಳಿದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !