ಎಫ್‌ಸಿ ಗೋವಾಗೆ ಸೂಪರ್‌ ಕಪ್‌

ಬುಧವಾರ, ಏಪ್ರಿಲ್ 24, 2019
25 °C
ಕೊರೊಮಿನಸ್‌ ಕಾಳ್ಚಳಕಕ್ಕೆ ಸೋತ ಚೆನ್ನೈಯಿನ್‌

ಎಫ್‌ಸಿ ಗೋವಾಗೆ ಸೂಪರ್‌ ಕಪ್‌

Published:
Updated:
Prajavani

ಭುವನೇಶ್ವರ: ಅಮೋಘ ಆಟವಾಡಿದ ಎಫ್‌ಸಿ ಗೋವಾ ತಂಡ 2–1ರಿಂದ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಮಣಿಸಿ ಸೂಪರ್‌ ಕಪ್‌ ಗೆದ್ದಿತು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಫೆರೆನ್‌ ಕೊರೊಮಿನಸ್‌ ಮತ್ತು ರಫೆಲ್‌ ಆಗಸ್ಟೋ ಅವರ ಕಾಲ್ಚಳಕದಿಂದ ಅರಳಿದ ಗೋಲುಗಳಿಂದ ಗೋವಾ ಎಫ್‌ಸಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಒಲಿಯಿತು.

ಎರಡೂ ತಂಡದ ಆಟಗಾರರು ಸಮಬಲದ ಹೋರಾಟ ನಡೆಸಿದರು. 51ನೇ ನಿಮಿಷದಲ್ಲಿ ಫೆರೆನ್‌ ಕೊರೊಮಿನಸ್‌ ಗೋಲು ಬಾರಿಸಿ ಗೋವಾ ತಂಡದ ಮೇಲುಗೈಗೆ ಕಾರಣರಾದರು. ಮರು ನಿಮಿಷದಲ್ಲಿ ಚೆನ್ನೈಯಿನ್‌ ತಂಡದ ರಫೆಲ್‌ ಆಗಸ್ಟೋ ಅವರು ಗೋಲುಗಳಿಸಿ ತಿರುಗೇಟು ಕೊಟ್ಟರು. 64ನೇ ನಿಮಿಷದಲ್ಲಿ ಬ್ರಾಂಡನ್‌ ಫರ್ನಾಂಡಿಸ್‌ ಅವರು ಚುರುಕಿನ ಆಟವಾಡಿ ಚೆಂಡನ್ನು ಗೋಲಾಗಿಸಿದರು. ಗೋವಾ ಮುನ್ನಡೆಗೆ ಈ ಮೂಲಕ ನೆರವಾದರು.

ಚೆನ್ನೈಯಿನ್ ತಂಡದ ರಫೆಲ್‌ ಆಗಸ್ಟೋ, ಅನಿರುದ್ಧ್ ಥಾಪಾ ಮತ್ತು ಧನಪಾಲ್‌ ಗಣೇಶ್‌ ಮಿಡ್‌ಫೀಲ್ಡ್‌ನಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾಗಿದ್ದು ಚೆನ್ನೈಯಿನ್‌ಗೆ ದುಬಾರಿಯಾಯಿತು. ಪಂದ್ಯದ ಕೊನೆವರೆಗೂ ಗೋವಾ ತಂಡದ ಗೋಲ್‌ ಕೀಪರ್‌ ಮೊಹಮದ್‌ ನವಾಜ್‌ ಅವರು ರಕ್ಷಣಾ ಗೋಡೆಯಂತೆ ನಿಂತು ಚೆನ್ನೈಯಿನ್‌ ತಂಡದ ಎಲಿ ಸಬಿಯ ಮತ್ತು ಆಗಸ್ಟೋ ಅವರ ಗೋಲು ಗಳಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದರು. ಈ ಮೂಲಕ ‘ಹೀರೊ ಆಫ್‌ ದ ಮ್ಯಾಚ್‌’ ಗೌರವಕ್ಕೆ ಪಾತ್ರರಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !