ಸಿಎಂ ಭಾವಚಿತ್ರಕ್ಕೆ ಕಬ್ಬಿನ ಹಾಲಿನ ಅಭಿಷೇಕ

ಮಂಗಳವಾರ, ಏಪ್ರಿಲ್ 23, 2019
25 °C

ಸಿಎಂ ಭಾವಚಿತ್ರಕ್ಕೆ ಕಬ್ಬಿನ ಹಾಲಿನ ಅಭಿಷೇಕ

Published:
Updated:
Prajavani

ಮಂಡ್ಯ: ತಾಲ್ಲೂಕಿನ ಕಾರಸವಾಡಿ ಗ್ರಾಮಸ್ಥರು ಭಾನುವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಕಬ್ಬಿನ ಹಾಲು ಹಾಗೂ ಭತ್ತದ ಅಭಿಷೇಕ ಮಾಡಿದರು.

ಮುಖ್ಯಮಂತ್ರಿಗಳು, ಮೈಷುಗರ್‌ ಕಾರ್ಖಾನೆ ಬಾಕಿ ಉಳಿಸಿಕೊಂಡಿದ್ದ ₹ 17 ಕೋಟಿ ಬಾಕಿ ಹಣ ಕೊಡಿಸಿದ್ದಾರೆ. ಸಕಾಲದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ನೆರವಾಗಿದ್ದಾರೆ. ಹೀಗಾಗಿ ಅವರ ಭಾವಚಿತ್ರಕ್ಕೆ ಕಬ್ಬಿನ ಹಾಲು ಹಾಗೂ ಭತ್ತದ ಅಭಿಷೇಕ ಮಾಡಿದ್ದೇವೆ. ಅವರ ಪುತ್ರ, ಮೈತ್ರಿ ಅಭ್ಯರ್ಥಿಕೆ.ನಿಖಿಲ್‌ಗೆ ಸಂಪೂರ್ಣ ಬೆಂಬಲವಿದೆ ಎಂದು ಗ್ರಾಮಸ್ಥರು ಹೇಳಿದರು. ಬಿಂದಿಗೆಯಲ್ಲಿ ಕಬ್ಬಿನ ಹಾಲು ತಂದು ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಅಭಿಷೇಕ ಮಾಡಿದರು. ನಂತರ ಭತ್ತವನ್ನು ಭಾವಚಿತ್ರದ ಮೇಲೆ ಸುರಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !