ದರ್ಶನ್‌ಗೆ ಕೈನೋವು: ಪ್ರಚಾರ ಮೊಟುಕು

ಶನಿವಾರ, ಏಪ್ರಿಲ್ 20, 2019
28 °C

ದರ್ಶನ್‌ಗೆ ಕೈನೋವು: ಪ್ರಚಾರ ಮೊಟುಕು

Published:
Updated:

ಮದ್ದೂರು: ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದ ನಟ ದರ್ಶನ್‌ಗೆ ಭಾನುವಾರ ಕೈನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಚಾರ ಮೊಟುಕುಗೊಳಿಸಿದರು.

ತಾಲ್ಲೂಕಿನ ಮಲ್ಲನಕುಪ್ಪೆ ಗೇಟ್, ಕೆಸ್ತೂರು, ಮಾಚಹಳ್ಳಿ, ತೊರೆಶೆಟ್ಟಿಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಅಪಾರ ಸಂಖ್ಯೆಯ ಅಭಿಮಾನಿಗಳು ಅವರಿಗೆ ಹಸ್ತಲಾಘವ ಕೊಡಲು ಮುಂದಾದರು. ನೋವಿನಲ್ಲೂ ಅವರು ಅಭಿಮಾನಿಗಳಿಗೆ ಕೈನೀಡುತ್ತಿದ್ದರು. ಆದರೆ ನೋವು ಹೆಚ್ಚಾದ ಕಾರಣ ಪ್ರಚಾರ ನಿಲ್ಲಿಸಿ ತೆರಳಿದರು. ನೆಚ್ಚಿನ ನಟನನ್ನು ನೋಡಲು ಸೇರಿದ್ದ ವಿವಿಧ ಗ್ರಾಮಗಳ ಜನರು ನಿರಾಸೆಗೊಂಡರು.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 2

    Sad
  • 1

    Frustrated
  • 0

    Angry

Comments:

0 comments

Write the first review for this !