ಉದ್ಯಮಿ ಆತ್ಮಹತ್ಯೆ

ಶುಕ್ರವಾರ, ಏಪ್ರಿಲ್ 19, 2019
27 °C

ಉದ್ಯಮಿ ಆತ್ಮಹತ್ಯೆ

Published:
Updated:
Prajavani

ಮಂಗಳೂರು: ಉದ್ಯಮಿ ಹಾಗೂ ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿದ್ದ ನಿಖಿಲ್‌ ಎಂ. ಪೈ ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಮೆ ಮಾಡಿಕೊಂಡಿದ್ದಾರೆ.

ಉದ್ಯಮಿಯಾಗಿದ್ದ ನಿಖಿಲ್‌, ‘ದಿ ಹಂಗ್ರಿ 3 ಮೆನ್‌’ ಎಂಬ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಪತ್ನಿ ಮನೆಯಲ್ಲಿ ಇರಲಿಲ್ಲ. ದೇರೆಬೈಲ್‌ ಕೊಂಚಾಡಿಯ ನಾಗಕನ್ನಿಕಾ ದೇವಸ್ಥಾನದ ರಸ್ತೆಯಲ್ಲಿರುವ ಮನೆಯಲ್ಲಿ ಶನಿವಾರ ಸಂಜೆ ತಾಯಿಯೊಂದಿಗೆ ಜಗಳವಾಡಿಕೊಂಡು ಹೊರಹೋಗಿದ್ದರು. ನಂತರ ಮಾಲೆಮಾರ್‌ನಲ್ಲಿರುವ ವೇದಾಂಜಲಿ ಅಪಾರ್ಟ್‌ಮೆಂಟ್‌ನಲ್ಲಿದ್ದ ತನ್ನ ಫ್ಲ್ಯಾಟ್‌ನಲ್ಲಿ ವಿಷ ಸೇವಿಸಿದ್ದರು.

ಭಾನುವಾರ ಬೆಳಿಗ್ಗೆ ಮನೆಯವರು ಹುಡುಕಾಟ ನಡೆಸಿದಾಗ ಮಾಲೆಮಾರ್‌ನ ಫ್ಲ್ಯಾಟ್‌ನಲ್ಲಿ ನಿಖಿಲ್‌ ಮೃತದೇಹ ಪತ್ತೆಯಾಗಿದೆ. ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !