ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

ಶುಕ್ರವಾರ, ಏಪ್ರಿಲ್ 19, 2019
22 °C
ದ್ವಿತೀಯ ಪಿಯು

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

Published:
Updated:

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಶೇ 90.91 ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಶೇ 92.20 ಫಲಿತಾಂಶ ದಾಖಲಿಸಿ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷ ಶೇ 91.41 ಫಲಿತಾಂಶ ದಾಖಲಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಫಲಿತಾಂಶದ ಪ್ರಮಾಣದಲ್ಲಿ ತುಸು ಇಳಿಕೆ  ಕಂಡು ಬಂದಿದ್ದರೆ, ಅತ್ತ ಉಡುಪಿ ಜಿಲ್ಲೆ ಪ್ರಗತಿ ದಾಖಲಿಸಿದೆ. 2016–17ರ ಸಾಲಿನಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಶೇ 89.92 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು. ಆದರೆ ಅದಕ್ಕೆ ಮುಂಚಿನ ಸತತ ಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು.

2015–16ರಲ್ಲಿ ಶೇ 90.48 ಫಲಿತಾಂಶ ಪಡೆದರೆ, 2014–15ರಲ್ಲಿ ಶೇ 93.09 ಫಲಿತಾಂಶ ಪಡೆದು ರಾಜ್ಯದ ಜನತೆಯ ಹುಬ್ಬೇರುವಂತೆ ಮಾಡಿತ್ತು. 2013–14ರಲ್ಲಿ ಶೇ 86.04 ಫಲಿತಾಂಶ ಬಂದರೂ ಮೊದಲ ಸ್ಥಾನ ಕಾಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

 

ಇನ್ನಷ್ಟು...

ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಮೇಲೇರಿದ ಚಿಕ್ಕೋಡಿ, ಕೊಂಚ ಚೇತರಿಸಿಕೊಂಡ ಬೆಳಗಾವಿ

ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ

ಬಿಕಾಂ– ಅವಕಾಶಗಳ ಹುಲ್ಲುಗಾವಲು

ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !