ಶಿವಕುಮಾರ್ ಜೋತಿಷ್ಯ ಯಾವಾಗ ಕಲಿತರೋ?: ಆರ್‌.ಅಶೋಕ್‌ ತಿರುಗೇಟು

ಶುಕ್ರವಾರ, ಏಪ್ರಿಲ್ 19, 2019
22 °C

ಶಿವಕುಮಾರ್ ಜೋತಿಷ್ಯ ಯಾವಾಗ ಕಲಿತರೋ?: ಆರ್‌.ಅಶೋಕ್‌ ತಿರುಗೇಟು

Published:
Updated:

ಚಿಕ್ಕಬಳ್ಳಾಪುರ: ‘ರೇವಣ್ಣ ಅವರ ಲಿಂಬೆಕಾಯಿ ಜೋತಿಷ್ಯ ಡಿ.ಕೆ.ಶಿವಕುಮಾರ್ ಅವರು ಯಾವಾಗ ಕಲಿತರೋ? ದೇಶದಲ್ಲಿ ಅವರೇ ಎರಡಂಕಿಗೆ ಇಳಿದಿದ್ದಾರೆ. ಅವರು ಮೊದಲು ಅವರ ಸಂಖ್ಯೆ ನೋಡಿಕೊಳ್ಳಲಿ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌.ಅಶೋಕ್‌ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪರ ರೋಡ್ ಶೋ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುತ್ತೇವೆ’ ಎಂಬ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನವರದು ದೇಶದಲ್ಲಿ 40 ಸ್ಥಾನ ಇರುವುದು. ಈ ಬಾರಿ ಅದು 20, 10ಕ್ಕೆ ಇಳಿಯುತ್ತದೆಯೋ ಗೊತ್ತಿಲ್ಲ. ಹತ್ತಾರು ಬಾರಿ ಸರ್ಕಾರ ನಡೆಸಿದ 100 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ ದೇಶದಲ್ಲಿ ವಿರೋಧ ಪಕ್ಷವಾಗಲೂ ನಾಲಾಯಕ್‌ ಆಗಿದೆ. ಅವರೂ ನಮಗೆ ಧಮಕಿ ಕೊಡುತ್ತಾರೆ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !