ಆಳ್ವಾಸ್ ಕಾಲೇಜಿಗೆ ಶೇ 98 ಫಲಿತಾಂಶ 

ಶುಕ್ರವಾರ, ಏಪ್ರಿಲ್ 26, 2019
21 °C

ಆಳ್ವಾಸ್ ಕಾಲೇಜಿಗೆ ಶೇ 98 ಫಲಿತಾಂಶ 

Published:
Updated:

ಮೂಡುಬಿದಿರೆ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ 5,051 ವಿದ್ಯಾರ್ಥಿಗಳ ಪೈಕಿ 4,961 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ 98.21 ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ ಓಲ್ವಿಟ ಅನ್ಸಿಲ್ಲಾ ಡಿಸೋಜಾ 596 (ಶೇ 98.56) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.  ವಾಣಿಜ್ಯ ವಿಷಯದಲ್ಲಿ ಅಶೋಕ್ ನಾಯ್ಡು (593), ವಿಷ್ಮ ಹೆಗ್ಡೆ (592) ಮತ್ತು ಸಂದೀಪ್ ಟಿ. (591) ಅಂಕ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದೀಪಿಕಾ ಎಚ್.ಎಸ್., ದರ್ಶನ್ ಸಮರ್ಥ ಮತ್ತು ಶ್ರುತಿ ಪಿ.ಎನ್. ತಲಾ 590 ಅಂಕ ಪಡೆದು ಉತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 4,050 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 98.13 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 873 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ 98.53 ಫಲಿತಾಂಶ ಲಭಿಸಿದರೆ; ಕಲಾ ವಿಭಾಗದಲ್ಲಿ ಎಲ್ಲಾ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ಬಂದಿದೆ.

ಶೇಕಡಾವಾರು ಸಾಧನೆ: ಶೇ 99 ಅಂಕದೊಂದಿಗೆ 1, ಶೇ 98 ಅಂಕದೊಂದಿಗೆ 17, ಶೇ 97 ಅಂಕದೊಂದಿಗೆ 50, ಶೇ 96ರಂತೆ 150, ಶೇ 95ರಂತೆ 346 ಮತ್ತು ಶೇ 90ರಂತೆ 1,304 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉತ್ತಮ ಸಾಧನೆ ತೋರಿದ್ದಾರೆ.

ಪ್ರಥಮ ದರ್ಜೆಯಲ್ಲಿ 2,557, ದ್ವಿತೀಯ ದರ್ಜೆಯಲ್ಲಿ 157 ಮತ್ತು ತೃತೀಯ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !