ಮಂಡ್ಯ: ಗುರುತಿನ ಚೀಟಿಯಲ್ಲಿ ಅನಾಮಧೇಯ ಭಾವಚಿತ್ರ

ಭಾನುವಾರ, ಏಪ್ರಿಲ್ 21, 2019
32 °C
ಚುನಾವಣಾಧಿಕಾರಿಗಳ ಯಡವಟ್ಟು, ಕಂಗಾಲಾದ ಮತದಾರರು

ಮಂಡ್ಯ: ಗುರುತಿನ ಚೀಟಿಯಲ್ಲಿ ಅನಾಮಧೇಯ ಭಾವಚಿತ್ರ

Published:
Updated:
Prajavani

ಮಂಡ್ಯ: ಮತ ಚಲಾವಣೆಗೆ ಅನುಕೂಲವಾಗುವಂತೆ ಚುನಾವಣಾಧಿಕಾರಿಗಳು ಮತದಾರರಿಗೆ ವಿತರಣೆ ಮಾಡಿರುವ ಗುರುತಿನ ಚೀಟಿಯಲ್ಲಿ (ವೋಟರ್‌ ಸ್ಲಿಪ್‌) ಅನಾಮಧೇಯ ಭಾವಚಿತ್ರಗಳಿದ್ದು ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.

ಮತಗಟ್ಟೆಗಳಿಗೆ ತೆರಳಿದ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವ ಗೊಂದಲ ತಪ್ಪಿಸಲು ಚುನಾವಣಾಧಿಕಾರಿಗಳು ಮೊದಲೇ ಗುರುತಿನ ಚೀಟಿ ವಿತರಣೆ ಮಾಡಿತ್ತಾರೆ. ಈಗಾಗಲೇ 13 ಲಕ್ಷ ಚೀಟಿ ವಿತರಣೆ ಮಾಡಲಾಗಿದ್ದು ಅವುಗಳನ್ನು ಹಲವು ಗೊಂದಲ ಕಂಡುಬಂದಿವೆ. ಅಶೋಕ್‌ ನಗರದ ನಿವಾಸಿಗಳಾದ ಸುಬ್ಬರಾಯ ಅಲ್ಸೆ ಅವರಿಗೆ 65 ವರ್ಷ ವಯಸ್ಸು, ಆದರೆ ವಿತರಣೆಯಾಗಿರುವ ಗುರುತಿನ ಚೀಟಿಯಲ್ಲಿ ಅನಾಮಧೇಯ 25 ವರ್ಷದ ಯುವಕನ ಭಾವಚಿತ್ರವಿದೆ.

ಸುಬ್ಬರಾಯ ಅವರ ಪತ್ನಿ ವೇದಾವತಿ ಅಲ್ಸೆ ಅವರಿಗೆ 60 ವರ್ಷ ವಯಸ್ಸು. ಆದರೆ ಅನಾಮದೇಯ ಯುವತಿಯ ಭಾವಚಿತ್ರ ಹಾಕಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಚೀಟಿಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಈಗ ಉಂಟಾಗಿರುವ ಸಮಸ್ಯೆಯಿಂದ ದಂಪತಿ ಗೊಂದಲಕ್ಕೀಡಾಗಿದ್ದು ಮತದಾನದಿಂದು ದೂರ ಉಳಿಯಲು ನಿರ್ಧರಿಸಿದ್ದಾರೆ.

‘ಮತದಾರರ ಪಟ್ಟಿಯಲ್ಲಿ ಏನೋ ತಪ್ಪಾಗಿರಬಹುದು. ಹೀಗಾಗಿ ತಪ್ಪು ಚೀಟಿ ಬಂದಿದೆ. ನಮಗೆ ವಯಸ್ಸಾಗಿದೆ, ಬಿಸಿಲು ಬೇರೆ. ಈಗ ಕಚೇರಿಗೆ ಅಲೆದು ತಪ್ಪು ಸರಿಪಡಿಸಿಕೊಳ್ಳಲು ನಮ್ಮಿಂದ ಆಗುವುದಿಲ್ಲ. ಹೀಗಾಗಿ ಈ ಬಾರಿ ಮತ ಹಾಕದಿರಲು ನಿರ್ಧರಿಸಿದ್ದೇವೆ’ ಎಂದು ಸುಬ್ಬರಾಯ ತಿಳಿಸಿದರು.

ದಂಪತಿ ಮಾತ್ರವಲ್ಲದೇ ಇನ್ನೂ ಅನೇಕರ ಭಾವಚಿತ್ರಗಳು ಬದಲಾಗಿವೆ. ಸಾರ್ವಜನಿಕರು ಈ ಬಗ್ಗೆ ಜಿಲ್ಲಾ ಚುನಾವಣಾ ಕಚೇರಿ ಸಂಪರ್ಕಿಸಿದ್ದಾರೆ. ಮತದಾನಕ್ಕೆ ಎರಡು ದಿನ ಮಾತ್ರ ಉಳಿದಿದ್ದು ತಪ್ಪು ಸರಿಪಡಿಸದಿದ್ದರೆ ಒಟ್ಟು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಈ ಥರದ ಸಮಸ್ಯೆ ಇಲ್ಲಿಯವರೆಗೆ ಕಂಡು ಬಂದಿಲ್ಲ. ಮತದಾರರ ಪಟ್ಟಿಯಲ್ಲೇ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಶೀಘ್ರ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ತಪ್ಪು ಎಲ್ಲಿ ಆಗಿದೆ ಎಂಬುದನ್ನು ಗುರುತಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !