ದಾವಣಗೆರೆಗೆ ಪಾಸ್‌ಪೋರ್ಟ್, ವೀಸಾ ಕೇಂದ್ರದ ಕೊಡುಗೆ: ಅಮಿತ್‌ ಶಾ

ಬುಧವಾರ, ಏಪ್ರಿಲ್ 24, 2019
23 °C
ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಾಧನೆಗಳ ಪಟ್ಟಿ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ದಾವಣಗೆರೆಗೆ ಪಾಸ್‌ಪೋರ್ಟ್, ವೀಸಾ ಕೇಂದ್ರದ ಕೊಡುಗೆ: ಅಮಿತ್‌ ಶಾ

Published:
Updated:
Prajavani

ಹೊನ್ನಾಳಿ: ದಾವಣಗೆರೆ ಜಿಲ್ಲೆಗೆ ಪಾಸ್‌ಪೋರ್ಟ್‌ ಹಾಗೂ ವೀಸಾ ಕೇಂದ್ರ ಸ್ಥಾಪಿಸಲಾಗಿದೆ. ಹರಿಹರದಲ್ಲಿ 275 ಎಕರೆ ಜಾಗದಲ್ಲಿ ಗೊಬ್ಬರ ತಯಾರಿಕೆಯ ಕಾರ್ಖಾನೆ ಪ್ರಾರಂಭಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಿಳಿಸಿದರು.

ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರ ಮತಯಾಚಿಸಲು ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲುಮಾರ್ಗದ ಸರ್ವೆ ಕಾರ್ಯ ಈಗಾಗಲೇ ಮುಗಿದಿದ್ದು, ಕಾಮಗಾರಿಯನ್ನು ಬೇಗ ಪ್ರಾರಂಭಿಸಲಿದ್ದೇವೆ. ಬೆಂಗಳೂರು–ಹುಬ್ಬಳ್ಳಿ ವಿಶ್ವ ಮಾನವ ಎಕ್ಸ್‌ಪ್ರೆಸ್‌ ರೈಲಿನಿಂದ ಇಲ್ಲಿನ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ’ ಎಂದರು.

ಸ್ಮಾರ್ಟ್‌ಸಿಟಿ ಅನುದಾನದಲ್ಲಿ ₹ 6.5 ಕೋಟಿ ವೆಚ್ಚದಲ್ಲಿ ದಾವಣಗೆರೆಯಲ್ಲಿ ಸಾಫ್ಟ್‌ವೇರ್‌ ಇಂಡಿಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣವಾಗಲಿದೆ. ಅಲ್ಲದೆ ರಸ್ತೆ ನಿರ್ಮಾಣಕ್ಕೆ ₹ 75 ಕೋಟಿ ವಿನಿಯೋಗಿಸಲಾಗುವುದು ಎಂದು ಮುಂದಿನ ಯೋಜನೆಗಳ ವಿವರ ಬಿಚ್ಚಿಟ್ಟರು.

ಕ್ಷೇತ್ರದ 10 ಸಾವಿರ ಹಳ್ಳಿಗರಿಗೆ ಹಾಗೂ ನಗರದ 3 ಸಾವಿರ ಜನರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗಿದೆ ಎಂದ ಅವರು, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿದರೆ ಇಂಥ ಇನ್ನಷ್ಟು ಕೆಲಸಗಳು ಜಿಲ್ಲೆಗೆ ದಕ್ಕಲಿವೆ ಎಂಬ ಧಾಟಿಯಲ್ಲಿ ಮಾತನಾಡಿದರು.

ಇಲ್ಲಿನ ಮೈತ್ರಿ ಸರ್ಕಾರ ರಾಜ್ಯದ ಅಥವಾ ದಾವಣಗೆರೆ ಅಭಿವೃದ್ಧಿಯನ್ನು ಮಾಡುತ್ತಿಲ್ಲ. ಎಟಿಎಂನಂತೆ ಅಧಿಕಾರ ಬಳಸಿಕೊಂಡು ಹಣ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಒಂದೆಡೆ ಬಿಜೆಪಿ ಒಳಗೊಂಡ ಎನ್‌ಡಿಎ ಮಿತ್ರಪಕ್ಷಗಳು ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿವೆ. ಇನ್ನೊಂದೆಡೆ ರಾಹುಲ್‌ ಬಾಬಾ ಹಾಗೂ ಸಂಗಡಿಗರು. ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ, ಅವರಲ್ಲಿ ಉತ್ತರವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !