ಏ.21 ರಿಂದ ಸಾಂಸ್ಕೃತಿಕ ತರಬೇತಿ ಶಿಬಿರ

ಶುಕ್ರವಾರ, ಏಪ್ರಿಲ್ 26, 2019
35 °C

ಏ.21 ರಿಂದ ಸಾಂಸ್ಕೃತಿಕ ತರಬೇತಿ ಶಿಬಿರ

Published:
Updated:

ಚಿಕ್ಕಬಳ್ಳಾಪುರ: ‘ನಿಡುಮಾಮಿಡಿ ಜಗದ್ಗುರು ಶಾಖಾ ಮಠ, ಜಚನಿ ವಿದ್ಯಾಸಂಸ್ಥೆಗಳು, ಕರ್ನಾಟಕ ಜನಕಲಾರಂಗ, ಅನನ್ಯ ಕಲಾರಂಗ ಸಹಯೋಗದಲ್ಲಿ ಏಪ್ರಿಲ್ 21 ರಿಂದ ಮೇ 5 ವರೆಗೆ ನಗರದ ಜಚನಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಸಾಂಸ್ಕೃತಿಕ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ರಂಗನಿರ್ದೇಶಕ ಎ.ವಿ.ವೆಂಕಟರಾಮ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘25 ವೃತ್ತಿಪರ ತರಬೇತುದಾರರು ಶಿಬಿರದಲ್ಲಿ ಮಕ್ಕಳಿಗೆ ಹಾಡುಗಳ ಗಾಯನ ಮತ್ತು ನೃತ್ಯ ಸಂಯೋಜನೆ, ಕಿರುನಾಟಕ, ವಚನ ರೂಪಕ, ಕೋಲಾಟ, ಚಿತ್ರ ಕಲೆ ಮತ್ತು ಸೃಜನಶಶೀಲ ಕಲೆಗಳು, ವ್ಯಕ್ತಿತ್ವ ವಿಕಸನ, ನಾಯಕತ್ವ ಕೌಶಲ, ಅಧ್ಯಯನ ಕೌಶಲ ಮತ್ತು ಪುಸ್ತಕ ಪ್ರೀತಿ, ಜನಪದ ಕ್ರೀಡೆಗಳು, ಯೋಗ, ಧ್ಯಾನ ತರಬೇತಿ ನೀಡಲಿದ್ದಾರೆ’ ಎಂದು ಹೇಳಿದರು.

‘ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಮಧ್ಯಾಹ್ನ ಉಚಿತ ಊಟದ ಸೌಲಭ್ಯವಿರುತ್ತದೆ. ಬೇರೆ ತಾಲ್ಲೂಕುಗಳಿಂದ ಬರುವ ಮಕ್ಕಳಿಗೆ ವಸತಿ ವ್ಯವಸ್ಥೆ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದರು.

ಜಚನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಸುರೇಶ್, ಜಚನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕ ಕೆ.ಪಿ ನಾಗೇಶ್, ರಂಗ ನಿರ್ದೇಶಕ ಸೋ.ಸು ನಾಗೇಂದ್ರನಾಥ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !