ಮಹಾವೀರರ ಬದುಕು ನಮಗೆ ಪ್ರೇರಣೆಯಾಗಲಿ: ನೇಮಿಚಂದ್

ಭಾನುವಾರ, ಏಪ್ರಿಲ್ 21, 2019
26 °C
ಮಹಾವೀರ ಜಯಂತಿ ಕಾರ್ಯಕ್ರಮ

ಮಹಾವೀರರ ಬದುಕು ನಮಗೆ ಪ್ರೇರಣೆಯಾಗಲಿ: ನೇಮಿಚಂದ್

Published:
Updated:
Prajavani

ಚಿಕ್ಕಬಳ್ಳಾಪುರ: ನಗರದಲ್ಲಿ ಬುಧವಾರ ಭಗವಾನ್‌ ಮಹಾವೀರ ಜಯಂತಿ ಪ್ರಯುಕ್ತ ಗಾಂಧಿ ಕೊಳಾಯಿ ರಸ್ತೆಯಲ್ಲಿರುವ ಜೈನಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಮಹಾವೀರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾವೀರ ಜೈನ ಸಂಘದ ಅಧ್ಯಕ್ಷ ನೇಮಿಚಂದ್ ಮಾತನಾಡಿ, ‘ಜಗತ್ತಿಗೆ ಅಹಿಂಸಾ ತತ್ವ ಸಾರಿದ ಮಹಾವೀರರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರಿಗೂ ಮಹಾವೀರರ ಬದುಕು ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

‘ಅಹಿಂಸೆಯಿಂದಲೇ ವಿಶ್ವಕ್ಕೆ ಶಾಂತಿ. ಇಂತಹ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿ ಬಯಸಿದ ಜೈನ ಧರ್ಮದ ತೀರ್ಥಂಕರ ಭಗವಾನ್‌ ಮಹಾವೀರರ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ಜೈನ ಧರ್ಮದ 25ನೇ ತೀರ್ಥಂಕರರಾದ ಮಹಾವೀರರು ಜಗತ್ತಿಗೆ ಅಹಿಂಸಾ ತತ್ವ ಸಾರಿದರು. ಹಿಂಸೆಯಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಪ್ರತಿಪಾದಿಸಿದರು’ ಎಂದರು.

ಮಹಾವೀರ ಜೈನ ಸಂಘದ ಉಪಾಧ್ಯಕ್ಷ ದಲಿಪತ್ ರಾಜ್ ಮಾತನಾಡಿ, ‘ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂಬ ಪಂಚಶೀಲ ತತ್ತ್ವವನ್ನು ಬೋಧಿಸಿದರು. ತಮ್ಮ ಬೋಧನೆಗಳ ಮೂಲಕ ಜನರಲ್ಲಿ ವೈಚಾರಿಕ ಬದಲಾವಣೆ ಉಂಟು ಮಾಡಿದರು. ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಲು ಕಾಯಾ, ವಾಚಾ, ಮನಸಾ ಯತ್ನಿಸಿದರು’ ಎಂದು ಅಭಿಪ್ರಾಯಪಟ್ಟರು.

‘ಸರ್ವಜನ ಹಿತಾಯ, ಸರ್ವಜನ ಸುಖಾಯ ಎಂಬ ಧ್ಯೇಯವಾಕ್ಯದಲ್ಲಿ ಮುನ್ನಡೆದ ಜೈನಧರ್ಮ ಜೀವ ಪ್ರೇಮದ ಮಹತ್ವವನ್ನು ಸಾರುತ್ತ ಜನ ಸಮುದಾಯದ ಒಳಿತನ್ನು ಸಾರಿ ಭಾರತದ ಪುರಾತನ ಧರ್ಮವಾಗಿದೆ. ನಿಜವಾದ ಬದುಕೆಂದರೆ ಕೊಡುವ ಮೂಲಕ ಸಂತೃಪ್ತಿಯನ್ನು ಪಡೆಯುವುದೇ ಆಗಿದೆ. ಮಹಾವೀರರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರೂ ಅವರ ಬದುಕು ಪ್ರೇರಣೆಯಾಗಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ಮಹಾವೀರ ಜೈನ ಸಂಘದ ಖಜಾಂಚಿ ಕಾಂತಿಲಾಲ್, ಮುಖಂಡರಾದ ಬಾಬುಲಾಲ್, ಸಂಜಯ್ ಕುಮಾರ್, ಕಿಶೋರ್ ಕುಮಾರ್, ರಮೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !