ಸ್ಕೇಟಿಂಗ್‌ ಮೂಲಕ ಮತದಾನದ ಅರಿವು

ಶುಕ್ರವಾರ, ಏಪ್ರಿಲ್ 19, 2019
30 °C

ಸ್ಕೇಟಿಂಗ್‌ ಮೂಲಕ ಮತದಾನದ ಅರಿವು

Published:
Updated:
Prajavani

ಶಿಡ್ಲಘಟ್ಟ: ನಗರದ ಸ್ಕೇಟಿಂಗ್ ತಂಡದ ಸದಸ್ಯರು ಮತದಾನ ಜಾಗೃತಿ ನಡೆಸಲು ತಾಲ್ಲೂಕು ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಸ್ಕೇಟಿಂಗ್ ಮಾಡುತ್ತಾ ಬುಧವಾರ ಮುಂಜಾನೆ ಹೋಗಿ ಬಂದರು.

ಜಿಲ್ಲಾ ಸ್ವೀಪ್ ಸಮಿತಿ ಸಹಕಾರದೊಂದಿಗೆ ನಡೆದ ಈ ಜನಜಾಗೃತಿ ಸ್ಕೇಟಿಂಗ್ ಮಕ್ಕಳ ಬೆಂಗಾವಲಾಗಿ ಆಂಬ್ಯುಲೆನ್ಸ್‌, ಪೊಲೀಸರು ಮತ್ತು ಪೋಷಕರು ಸಾಗಿದರು.

ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ಮಾತನಾಡಿ, “ಪೋಷಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಸ್ಕೇಟಿಂಗ್‌ ಮಾಡಿಕೊಂಡು ಹೋಗುತ್ತಿದ್ದ ಮಕ್ಕಳ ಬೆಂಗಾವಲಾಗಿ ಹುರಿದುಂಬಿಸುತ್ತಾ ಸಾಗಿದರು. ಚಿಕ್ಕಬಳ್ಳಾಪುರದವರೆಗೂ ಮಕ್ಕಳು ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಕ್ಕಳು ಸ್ಕೇಟಿಂಗ್‌ ಮಾಡಿದರು” ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್‌, ಮುರಳಿ, ವೆಂಕಟಸ್ವಾಮಿ, ಶಿವಪ್ಪ, ಹರೀಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !