ಜಿಲ್ಲಾಧಿಕಾರಿ ಭರವಸೆ; ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆಯಲು ಗ್ರಾಮಸ್ಥರ ಒಪ್ಪಿಗೆ

ಬುಧವಾರ, ಏಪ್ರಿಲ್ 24, 2019
33 °C

ಜಿಲ್ಲಾಧಿಕಾರಿ ಭರವಸೆ; ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆಯಲು ಗ್ರಾಮಸ್ಥರ ಒಪ್ಪಿಗೆ

Published:
Updated:
Prajavani

ಬಾದಾಮಿ: ತಾಲ್ಲೂಕಿನ ಗಿಡ್ಡನಾಯಕನಾಳವನ್ನು ಕಂದಾಯ ಗ್ರಾಮವೆಂದು ಶೀಘ್ರ ಘೋಷಿಸುವುದಾಗಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್ ಭರವಸೆ ಕೊಟ್ಟ ಕಾರಣ ಮತದಾನ ಬಹಿಷ್ಕಾರವನ್ನು ಗ್ರಾಮಸ್ಥರು ಹಿಂದಕ್ಕೆ ಪಡೆದಿದ್ದಾರೆ. ಊರಿನ ಹಿರಿಯರಾದ ಬಿ.ಎಚ್. ಬಾನಿ ಈ ವಿಚಾರ ಪತ್ರಿಕೆಗೆ ತಿಳಿಸಿದ್ದಾರೆ.

ಗಿಡ್ಡನಾಯಕನಾಳವನ್ನು ಕಂದಾಯ ಗ್ರಾಮವೆಂದು ಘೋಷಣೆ ಮಾಡದ ಕಾರಣ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟಿಸಿದ್ದನ್ನು ಸ್ಮರಿಸಬಹುದು.

ಗ್ರಾಮದ ಹಿರಿಯರೊಂದಿಗೆ ಚರ್ಚಿಸಿದ ಮತದಾನ ಬಹಿಷ್ಕರಿಸಬೇಡಿ. ಮತದಾನ ನಿಮ್ಮ ಹಕ್ಕು ಇದೆ.  ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಇನ್ನೆರಡು ತಿಂಗಳು ಕಾಲಾವಕಾಶ ಕೊಡಿ ಎಂದು ಕೇಳಿದ್ದು, ಅದಕ್ಕೆ ಒಪ್ಪಿದ ಗ್ರಾಮಸ್ಥರು ಮತದಾನ ಮಾಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಧಿಕಾರಿಗಳ ಮತ್ತು ಗ್ರಾಮಸ್ಥರ ಮಧ್ಯೆ ಆರೋಗ್ಯಕರವಾದ ಚರ್ಚೆಯ ನಂತರ ಗ್ರಾಮಸ್ಥರು ಮತದಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಹೆಚ್ಚುವರಿ ಶಶಿಧರ ಖುರೇಶಿ, ಸಹಾಯಕ ಚುನಾವಣಾ ಅಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್ ಸುಹಾಸ್ ಇಂಗಳೆ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !