ಶಿಕ್ಷಣ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್

ಮಂಗಳವಾರ, ಏಪ್ರಿಲ್ 23, 2019
32 °C
ಪ್ರಜಾವಾಣಿ ವರದಿ ಆಧರಿಸಿ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು

ಶಿಕ್ಷಣ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್

Published:
Updated:
Prajavani

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಹಿರೇಮಾಗಿಯಲ್ಲಿ ಮಲಪ್ರಭಾ ನದಿ ಸೇತುವೆಗೆ ಸಂಪರ್ಕ ರಸ್ತೆ ಇಲ್ಲದ ಕಾರಣ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

‘ನದಿಗೆ ನೀರು ಬಂದರೆ ಶಾಲೆಗೆ ಗೈರು’ ಶೀರ್ಷಿಕೆಯಡಿ 2018ರ ಡಿಸೆಂಬರ್ 17ರ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಅದನ್ನು ಆಧರಿಸಿ ಲೋಕಾಯುಕ್ತರು ಏಪ್ರಿಲ್‌ 1ರಂದು ಜಲಸಂಪನ್ಮೂಲ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬಾಗಲಕೋಟೆ ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ, ಹುನಗುಂದ ತಹಶೀಲ್ದಾರ್ ಹಾಗೂ ಬಿಇಒಗೆ ನೊಟೀಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ನದಿಗೆ ನೀರು ಬಂದರೆ ಶಾಲೆಗೆ ಗೈರು!

ಚಿಕ್ಕಮಾಗಿ– ಹಿರೇಮಾಗಿ ಬ್ರಿಜ್‌ ಕಮ್‌ ಬ್ಯಾರೇಜ್‌ನಿಂದ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದ ಕಾರಣ ಸೇತುವೆ ಇದ್ದರೂ ಇಲ್ಲದಂತಾಗಿದೆ. ಚಿಕ್ಕಮಾಗಿಯ ಶಾಲಾ ಮಕ್ಕಳು, ಊರಿನವರು ಖಾಸಗಿಯವರ ಜಮೀನಿನ ಕಾಲು ದಾರಿಯಲ್ಲಿ ಹೋಗಬೇಕಿದೆ. ಹೊಲದ ಮಾಲೀಕರು ಬೆಳೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಓಡಾಟಕ್ಕೆ ನಿರ್ಬಂಧ ವಿಧಿಸಿ ಹೊಲದ ಮಾಲೀಕರು ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕುತ್ತಾರೆ. ಇದರಿಂದ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಗೈರಾಗುತ್ತಾರೆ. ಗ್ರಾಮಸ್ಥರು 30 ಕಿ.ಮೀ ಬಳಸಿಕೊಂಡು ಓಡಾಟ ಮಾಡಬೇಕಿದೆ. ಕಳೆದ 10 ವರ್ಷಗಳಿಂದ ಇದೇ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. 

ಎಂಟು ವಾರಗಳಲ್ಲಿ ವರದಿಗೆ ಸೂಚನೆ:
ಪ್ರಜಾವಾಣಿ ವರದಿಯನ್ನು ಸಾಕ್ಷ್ಯವಾಗಿ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿರುವ ಲೋಕಾಯುಕ್ತರು, ಪ್ರಕರಣದ ಬಗ್ಗೆ ಎಂಟು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಹಾಗೂ ಮಕ್ಕಳು ಶಾಲೆಗೆ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅದರ ಪ್ರತಿಯನ್ನು ‘ಪ್ರಜಾವಾಣಿ’ಗೂ ಕಳುಹಿಸಿದ್ದಾರೆ.


ಪ್ರಜಾವಾಣಿ ವರದಿ ಆಧರಿಸಿ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !