ಕಮಿಷನ್ ಹಣದಲ್ಲಿ ಮಗನ ಚುನಾವಣೆ: ಕುಮಾರಸ್ವಾಮಿ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
31 °C

ಕಮಿಷನ್ ಹಣದಲ್ಲಿ ಮಗನ ಚುನಾವಣೆ: ಕುಮಾರಸ್ವಾಮಿ ವಿರುದ್ಧ ಶ್ರೀರಾಮುಲು ವಾಗ್ದಾಳಿ

Published:
Updated:

ಬಾಗಲಕೋಟೆ: ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಸೇರಿದಂತೆ ಸುತ್ತಲಿನ ಐದು ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಅದರಿಂದ ಬಂದ ಕಮಿಷನ್‌ನಿಂದ ನೂರಾರು ಕೋಟಿ ಹಾಕಿ ಮಗನ ಚುನಾವಣೆ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.

ಬಾದಾಮಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನೂರಕ್ಕೆ ನೂರು ನಿಖಿಲ್ ಸೋಲುತ್ತಾನೆ. ಸುಮಲತಾ ಗೆಲ್ಲುತ್ತಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು.

ಉತ್ತರ ಕರ್ನಾಟಕವನ್ನು ಕುಮಾರಸ್ವಾಮಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಿದ್ದರು. ಈಗ ಎರಡನೇ ಹಂತದಲ್ಲಿ ಈ ಭಾಗದ ಜನ ಮುಖ್ಯಮಂತ್ರಿ ಎಲ್ಲಿದ್ದೀರಪ್ಪಾ ಎಂದು ಕೇಳಬೇಕಾಗುತ್ತದೆ ಎಂಬುದಾಗಿ ಲೇವಡಿ ಮಾಡಿದರು.

‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರದ್ದು ಈಗ ಏನೂ ನಡೆಯುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೂ ಬೇಡ. ಜೆಡಿಎಸ್‌ಗೂ ಬೇಡ ಎಂಬಂತಾಗಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

  • 7

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !