ಐಜೆಟಿ ವಿಮಾನದ ಪರೀಕ್ಷೆ ಯಶಸ್ವಿ

ಶುಕ್ರವಾರ, ಮೇ 24, 2019
22 °C

ಐಜೆಟಿ ವಿಮಾನದ ಪರೀಕ್ಷೆ ಯಶಸ್ವಿ

Published:
Updated:
Prajavani

ಬೆಂಗಳೂರು: ಎಚ್‌ಎಎಲ್‌ ನಿರ್ಮಿತ ಸುಧಾರಿತ ಮಧ್ಯಂತರ ಜೆಟ್‌ ತರಬೇತಿ (ಐಜೆಟಿ) ವಿಮಾನದ ಪರೀಕ್ಷೆ ಬುಧವಾರ ಬೆಂಗಳೂರಿನಲ್ಲಿ ನಡೆಯಿತು.

ಭಾರತೀಯ ವಾಯು ಪಡೆಯ ಪೈಲಟ್‌ಗಳ ತರಬೇತಿಗಾಗಿ ಈ ತರಬೇತಿ ವಿಮಾನವನ್ನು ಬಳಸಲಾಗುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ದೋಷ ಕಂಡು ಬರಲಿಲ್ಲ. ಇದರ ಯಶಸ್ಸು ಐಜೆಟಿ ಕಾರ್ಯಕ್ರಮದಲ್ಲಿ ಮಹತ್ವದ ಹೆಜ್ಜೆ ಎಂದು ವ್ಯಾಖ್ಯಾನಿಸಲಾಗಿದೆ.

ಭಾರತೀಯ ವಾಯುಪಡೆಯ ಪೈಲಟ್‌ಗಳ ಎರಡನೇ ಹಂತದ ತರಬೇತಿಗಾಗಿ ಐಜೆಟಿ (ಎಚ್‌ಜೆಟಿ36) ವಿಮಾನವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. 2016ರಲ್ಲಿ ವಿಮಾನದ ಸ್ಪಿನ್‌ ಪರೀಕ್ಷೆ ವೇಳೆ ಸಮಸ್ಯೆ ಎದುರಾಗಿತ್ತು. ಬಳಿಕ ವಿಮಾನದ ಪರೀಕ್ಷೆ ತಡೆ ಹಿಡಿಯಲಾಗಿತ್ತು.

‘ನಮ್ಮ ಸಂಸ್ಥೆಯು ಐಜೆಟಿ ಎಲ್‌ಎಸ್‌ಪಿ4 ವಿಮಾನವನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ವಿಂಡ್‌ ಟನಲ್ ವಿಸ್ತೃತ ಅಧ್ಯಯನವನ್ನೂ ನಡೆಸಿದೆ. ಹಲವು ಸವಾಲುಗಳನ್ನು ಮುಂದಿಟ್ಟುಕೊಂಡು ವಿಮಾನದಲ್ಲಿ ಪರಿವರ್ತನೆ ಮಾಡಲಾಗಿದೆ’ ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !