ಟೀಂ ಮೋದಿ ವಿಸರ್ಜನೆ ಏ.23ಕ್ಕೆ: ಸೂಲಿಬೆಲಿ

ಸೋಮವಾರ, ಮೇ 20, 2019
30 °C

ಟೀಂ ಮೋದಿ ವಿಸರ್ಜನೆ ಏ.23ಕ್ಕೆ: ಸೂಲಿಬೆಲಿ

Published:
Updated:

ಬಾಗಲಕೋಟೆ: ‘ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಆರಂಭಿಸಿದ್ದ ಟೀಂ ಮೋದಿ ಸಂಘಟನೆಯನ್ನು ಏಪ್ರಿಲ್ 23 ರಂದು ಸಂಜೆ 6ಕ್ಕೆ ವಿಸರ್ಜಿಸಲಾಗುತ್ತಿದೆ’ ಎಂದು ಸಂಘಟನೆ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

‘ಈಗಾಗಲೇ ಏಪ್ರಿಲ್ 18 ರಂದು ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಟೀಂ ವಿಸರ್ಜನೆಗೊಂಡಿದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಉದ್ದೇಶದಿಂದ 2018ರ ಡಿಸೆಂಬರ್ 16 ರಂದು ‘ಟೀಂ ಮೋದಿ’ ರಚನೆಯಾಗಿತ್ತು. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಎರಡು ಕಡೆ ಪ್ರತ್ಯೇಕವಾಗಿ ರಥ ಯಾತ್ರೆ ಆರಂಭಿಸಿ ಮೋದಿ ಮಾಡಿರುವ ಕೆಲಸಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲಾಗಿತ್ತು’ ಎಂದರು.

‘ಈ ಎರಡು ಯಾತ್ರೆಗಳ ಅವಧಿಯಲ್ಲಿ ಒಟ್ಟು 500 ಸಾರ್ವಜನಿಕ ಕಾರ್ಯಕ್ರಮ ನಡೆಸಿದ್ದು, ಹೆಚ್ಚಿನವು ಗ್ರಾಮೀಣ ಭಾಗದಲ್ಲಿ ಜರುಗಿವೆ. ಒಂದು ಭಾಗದ ಯಾತ್ರೆ ಈಗಾಗಲೇ ಮುಗಿದಿದೆ. ಇನ್ನೊಂದು ಏಪ್ರಿಲ್ 20 ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮುಕ್ತಾಯವಾಗಲಿದೆ’ ಎಂದರು.

‘ಮೋದಿ ಸಾಧನೆಗಳನ್ನು ಗ್ರಾಮೀಣ ಯುವಕರಿಗೆ ಮುಟ್ಟಿಸುವ ದೃಷ್ಟಿಯಿಂದ ‘ಮೋದಿ ಧೂತ್’ ಆರಂಭಿಸಿ ಅದರ ಮೂಲಕ ಪ್ರತಿ ಗ್ರಾಮದ ಮನೆ ಮನೆಗೆ ಮುಟ್ಟಲಾಗಿದೆ’ ಎಂದರು.

‘ಮೋದಿ ಅವರ ರಾಷ್ಟ್ರೀಯತೆ, ದೇಶದ ಭದ್ರತೆಗೆ ಅವರಿಗಿರುವ ಬದ್ಧತೆ, ಜನಪರ ನಿಲುವುಗಳಿಂದ ಪ್ರಭಾವಿತರಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ ಹೊರತು, ಯಾವುದೇ ಅಭ್ಯರ್ಥಿಯ ಪರ ನಾವು ಪ್ರಚಾರ ಮಾಡಿಲ್ಲ’ ಎಂದರು.

‘ಸೈನಿಕರ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಆದರೆ ಅದರ ಹಿಂದಿರುವ ರಾಜತಾಂತ್ರಿಕ ವಿಷಯಗಳನ್ನು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ’ ಎಂದು ಸೂಲಿಬೆಲೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !