ಎಲ್ಲ ಧರ್ಮದವರೂ ಸಂಘಟಿತರಾಗಬೇಕು: ಗಿರೀಶ್ ಗೌಡ

ಗುರುವಾರ , ಮೇ 23, 2019
26 °C

ಎಲ್ಲ ಧರ್ಮದವರೂ ಸಂಘಟಿತರಾಗಬೇಕು: ಗಿರೀಶ್ ಗೌಡ

Published:
Updated:
Prajavani

ಅರಸೀಕೆರೆ: ಅನಾದಿ ಕಾಲದಿಂದಲೂ ಧರ್ಮ ಧರ್ಮಗಳು ಮತ್ತು ಜಾತಿ ಜಾತಿಗಳ ನಡುವೆ ಕಿತ್ತಾಟಗಳು ಸರ್ವೆ ಸಾಮಾನ್ಯವಾಗಿ ಜರುಗಿವೆ. ಆದರೆ, ಇಂದಿನ ಕಾಲಘಟ್ಟದಲ್ಲಿ ಸರ್ವ ಧರ್ಮಿಯರು ಹಾಗೂ ಎಲ್ಲ ಜಾತಿಗಳ ಸಮಾನ ಮನಸ್ಕರು ಒಂದೆಡೆ ಸೇರಿ ಸಂಘಟಿತರಾದರೆ ಜಾತ್ಯತೀತ ತತ್ವಕ್ಕೆ ಅರ್ಥ ಬರುತ್ತದೆ ಎಂದು ರಾಜ್ಯ ಕರುನಾಡ ಯುವ ಪಡೆಯ ರಾಜ್ಯಾಧ್ಯಕ್ಷ ಗಿರೀಶ್ ಗೌಡ ಹೇಳಿದರು.

ನಗರದ ಶ್ರೀನಿವಾಸ ನಗರದಲ್ಲಿರುವ ಗೌಡರ ಗ್ಯಾರೇಜ್ ಆವರಣದಲ್ಲಿ ಕರುನಾಡ ಯುವ ಪಡೆ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಾಮಾಜಿಕ ಸೇವೆಗೈದು ಬಡವರು ದೀನದಲಿತರ ಸಮಸ್ಯೆಗಳನ್ನು ಪರಿಹರಿಸಲು ರೈತಪರ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕರುನಾಡ ಯುವ ಪಡೆಯ ರಾಜ್ಯ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಪ್ರದೀಪ್ ಗೌಡ, ಕಾರ್ಯಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರೇಗೌಡ, ಜಬೀವುಲ್ಲಾಬೇಗ್, ಸಯ್ಯದ್ ರಫೀಕ್, ಸಂಘದ ಕಾನೂನು ಸಲಹೆಗಾರ ಡಾ.ಕುಮಾರ್, ಫಯಾಜ್ ಖಾನ್, ತೊಳಲುತೊರೆ ದೇವರಾಜ್, ಗಂಗಾಧರ್  ಇತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !