ಬೋಟಿನಿಂದ ಬಿದ್ದು ಮೀನುಗಾರ ಸಾವು

ಭಾನುವಾರ, ಮೇ 26, 2019
31 °C

ಬೋಟಿನಿಂದ ಬಿದ್ದು ಮೀನುಗಾರ ಸಾವು

Published:
Updated:

ಉಡುಪಿ: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಮೀನುಗಾರರೊಬ್ಬರು ಟ್ರೋಲ್‌ ಬೋಟ್‌ನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಯಾಧವ ಬೈರಾ ಮೋಗೇರ (31) ಎಂದು ಗುರುತಿಸಲಾಗಿದೆ. ಇವರು ‘ಶಿವಸಂಗಮ’ ಹೆಸರಿನ ಟ್ರೋಲ್‌ ಬೋಟ್‌ನಲ್ಲಿ ಕಲಾಸಿ ಕೆಲಸ ಮಾಡಿಕೊಂಡಿದ್ದರು. ಶನಿವಾರ ರಾತ್ರಿ 11.30ಕ್ಕೆ ಸುಮಾರಿಗೆ ಮಲ್ಪೆ ಬಂದರಿನಿಂದ 7 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬಲೆಯನ್ನು ತಯಾರು ನಡೆಸುತ್ತಿದ್ದ ಯಾಧವ ಬೈರಾ ಮೋಗೇರ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ಅವರನ್ನು ಕೂಡಲೇ ಮೇಲೆತ್ತಿದ್ದ ಇತರ ಮೀನುಗಾರರು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !