ಏ.25 ರಿಂದ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹ

ಬುಧವಾರ, ಮೇ 22, 2019
29 °C

ಏ.25 ರಿಂದ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹ

Published:
Updated:

ಚಿಕ್ಕಬಳ್ಳಾಪುರ: ‘ತಾಲ್ಲೂಕಿನ ಅಂಕಣಗೊಂದಿಯ ಶ್ರೀಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಏಪ್ರಿಲ್ 25 ರಿಂದ ಏಳು ದಿನಗಳ ಕಾಲ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ಸಮಿಯ ಸದಸ್ಯ ಪುರದಗಡ್ಡೆ ಕೃಷ್ಣಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಪ್ತಾಹದಲ್ಲಿ ನಿತ್ಯ ವಿವಿಧ ಭಜನೆ ಮಂಡಳಿ ಹಾಗೂ ಭಕ್ತರಿಂದ ಪೂಜಾ ಕಂಕೈರ್ಯಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ.25 ರಂದು ಬೆಳಿಗ್ಗೆ 8.30ಕ್ಕೆ ಆರಂಭಗೊಳ್ಳುವ ಈ ರಾಮಕೋಟಿ ಜಪಯಜ್ಞ ಒಟ್ಟು 168 ಗಂಟೆಗಳ ಕಾಲ ನಿರಂತರ ಭಜನೆ ನಡೆಯಲಿದೆ’ ಎಂದು ಹೇಳಿದರು.

‘ಸಪ್ತಾಹವನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರು ಉದ್ಘಾಟನೆ ಮಾಡಲಿದ್ದಾರೆ’ ಎಂದರು. ಶ್ರೀರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ಸಮಿತಿಯ ಮುಖಂಡರಾದ ಜಿ.ವಿ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮುನಿಯಪ್ಪ, ಸುದರ್ಶನ್, ಗಂಗಾಧರ ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !