ಹಾಸ್ಟೆಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಸೋಮವಾರ, ಮೇ 27, 2019
23 °C
ಜಿಲ್ಲೆಯ 22 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ 540 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರು, ಶೇ 87.96ರಷ್ಟು ಫಲಿತಾಂಶ

ಹಾಸ್ಟೆಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿನ ಪಿಯುಸಿ ವಿದ್ಯಾರ್ಥಿಗಳು ಶೇ 87.96ರಷ್ಟು ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ 22 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿನ 241 ಬಾಲಕರು ಹಾಗೂ 299 ಬಾಲಕಿಯರು ಸೇರಿದಂತೆ 540 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು, ಆ ಪೈಕಿ 475 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಗೌರಿಬಿದನೂರು ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ತರುಣ್ ಜಿ.ವಿ.ಕುಮಾರ್ 579 (ಶೇ 96.50), ಬಾಗೇಪಲ್ಲಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಎನ್.ಎಸ್.ಸತೀಶ್ 568 (ಶೇ 94.66) ಅಂಕ ಪಡೆದಿದ್ದಾರೆ. 

 

ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿನಿಲಯದ ಕೆ.ಆರ್.ಪಲ್ಲವಿ 567 (ಶೇ 94.50), ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಪಿ.ಎ.ನಾಗೇಶ್ 564 (ಶೇ 94.00) ಅಂಕ ಗಳಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಎನ್.ಎಸ್.ಶೈಲಜಾ 564 (ಶೇ 94), ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಕೆ.ವಿ.ವಿಜಯ್ 553 (ಶೇ92.16), ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಬಿ.ಎಂ.ಕೀರ್ತನಾ 552 (ಶೇ 92) ಅಂಕ ಗಳಿಸಿದ್ದಾರೆ.

ಗೌರಿಬಿದನೂರು ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಸಿ.ಎಸ್.ಮಲ್ಲಿಕಾ 552 (ಶೇ 92) ಹಾಗೂ ಚಿಕ್ಕಬಳ್ಳಾಪುರ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಮೇಘನಾ 549 (ಶೇ 91.50) ಅಂಕಗಳನ್ನು ಪಡೆದಿದ್ದಾರೆ.

ಉತ್ತೀರ್ಣರಾದ 475 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಶೇ 90ಕ್ಕಿಂತ, 34 ವಿದ್ಯಾರ್ಥಿಗಳು ಶೇ 80ಕ್ಕಿಂತ, 147 ವಿದ್ಯಾರ್ಥಿಗಳು ಶೇ 70ಕ್ಕಿಂತ, 98 ವಿದ್ಯಾರ್ಥಿಗಳು ಶೇ 60ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾಧಿಕಾರಿ ಅನಿರುದ್ಧ್ ಪಿ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿ.ಅಶೋಕ್ ಅಭಿನಂದನೆ ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !