ಶ್ರೀಲಂಕಾ ಬಾಂಬ್‌ ದಾಳಿಯಲ್ಲಿ ಮೃತಪಟ್ಟ ಮಂಡ್ಯದ ರಮೇಶ್‌ಗೌಡ ಅಂತ್ಯಕ್ರಿಯೆ ಇಂದು

ಬುಧವಾರ, ಮೇ 22, 2019
34 °C

ಶ್ರೀಲಂಕಾ ಬಾಂಬ್‌ ದಾಳಿಯಲ್ಲಿ ಮೃತಪಟ್ಟ ಮಂಡ್ಯದ ರಮೇಶ್‌ಗೌಡ ಅಂತ್ಯಕ್ರಿಯೆ ಇಂದು

Published:
Updated:

ಮಂಡ್ಯ: ಶ್ರೀಲಂಕಾ ಬಾಂಬ್‌ ದಾಳಿಯಿಂದ ಮೃತಪಟ್ಟಿರುವ ತುಮಕೂರಿನ ವ್ಯಾಪಾರಿ ರಮೇಶ್‌ಗೌಡ ಅವರ ಅಂತ್ಯಕ್ರಿಯೆ ಹುಟ್ಟೂರು ನಾಗಮಂಗಲ ತಾಲ್ಲೂಕಿನ ಬೆಟ್ಟದಕೋಟೆ ಗ್ರಾಮದಲ್ಲಿ ಗುರುವಾರ ನೆರವೇರಲಿದೆ.

ರಮೇಶ್‌ಗೌಡ ಅವರು ಕುಟುಂಬ ಸದಸ್ಯರೊಂದಿಗೆ ತುಮಕೂರಿನಲ್ಲಿ ವಾಸ ಮಾಡುತ್ತಿದ್ದರು. ವ್ಯವಹಾರಕ್ಕಾಗಿ ತುಮಕೂರಿಗೆ ವಲಸೆ ಹೋಗಿದ್ದು ಜೆಡಿಎಸ್‌ ಜೊತೆ ಗುರುತಿಸಿಕೊಂಡಿದ್ದರು. ಅವರ ಸಂಬಂಧಿಕರು ಬೆಟ್ಟದಕೋಟೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಮೃತದೇಹವನ್ನು ಮೊದಲು ತುಮಕೂರಿಗೆ ತರಲಾಗುವುದು. ನಂತರ ಬೆಟ್ಟದಕೋಟೆ ಗ್ರಾಮದ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !