ಮನೆ, ಮಕ್ಕಳತ್ತ ವೀಣಾ ಚಿತ್ತ!

ಸೋಮವಾರ, ಮೇ 20, 2019
30 °C
ಸಂಜೆ ಪತಿ,ಮಕ್ಕಳೊಂದಿಗೆ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡರು

ಮನೆ, ಮಕ್ಕಳತ್ತ ವೀಣಾ ಚಿತ್ತ!

Published:
Updated:
Prajavani

ಇಳಕಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಜಿಲ್ಲೆಯನ್ನು ಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಬುಧವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.

ಇಡೀ ದಿನ ಮಕ್ಕಳಿಗೆ ಸಮಯ ಕೊಟ್ಟು ಮನೆಯಲ್ಲಿಯೇ ಕಾಲ ಕಳೆದರು. ಈ ವೇಳೆ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರೊಂದಿಗೆ ಚುನಾವಣೋತ್ತರ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮನಗೆಲ್ಲಲು ನಿರಂತರ ಪ್ರವಾಸ, ಸಭೆ, ರ್‍ಯಾಲಿಗಳಲ್ಲಿ ಪಾಲ್ಗೊಳ್ಳಲು ವೀಣಾ ಅವಿರತವಾಗಿ ಓಡಾಟ ನಡೆಸಿದ್ದರು.

ಚುನಾವಣೆಯ ಒತ್ತಡ, ಬಿಸಿಲು ಹಾಗೂ ಸಾಕಷ್ಟು ಓಡಾಟದಿಂದ ದಣಿದಂತೆ ಕಂಡು ಬಂದರೂ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಮತದಾನದ ಪ್ರಮಾಣ ಹಾಗೂ ಪರಿಣಾಮದ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರು.  

‘2ನೇ ತರಗತಿ ಓದುವ ಮಗ ಶಿವಶಂಕರ ಹಾಗೂ ಮಗಳು ಶರಣಮ್ಮ ಅಮ್ಮನಿಗೆ ಅಂಟಿಕೊಂಡೇ ಇದ್ದದ್ದು ಕಂಡು ಬಂದಿತು. ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಹೆಚ್ಚು ಹೊತ್ತು ಜೊತೆಯಲ್ಲಿ ಇಲ್ಲದ್ದಕ್ಕೆ ಮಕ್ಕಳು ಬೇಸರ ಪಟ್ಟುಕೊಂಡಿದ್ದರು.  ಪ್ರವಾಸಕ್ಕೆ ಕರೆದೊಯ್ಯುವಂತೆ ಈಗ ಬೇಡಿಕೆ ಇಟ್ಟಿದ್ದಾರೆ’ ಎಂದು ವೀಣಾ ಹೇಳುತ್ತಾ ನಕ್ಕರು.

ಪತಿ ವಿಜಯಾನಂದ ಕಾಶಪ್ಪನವ ಅವರೊಂದಿಗೆ ಸಂಜೆ ಕೂಡಲಸಂಗಮದ ಸಂಗಮೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !