ಜಯದ ಓಟ ಮುಂದುವರಿಸುವತ್ತ ಧೋನಿ ಬಳಗದ ಚಿತ್ತ

ಭಾನುವಾರ, ಮೇ 26, 2019
30 °C
ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌–ಮುಂಬೈ ಇಂಡಿಯನ್ಸ್‌ ಹಣಾಹಣಿ ಇಂದು

ಜಯದ ಓಟ ಮುಂದುವರಿಸುವತ್ತ ಧೋನಿ ಬಳಗದ ಚಿತ್ತ

Published:
Updated:
Prajavani

ಚೆನ್ನೈ (ಪಿಟಿಐ): ಈಗಾಗಲೇ ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಎಂಟು ಗೆದ್ದಿರುವ ಮಹೇಂದ್ರಸಿಂಗ್ ಧೋನಿ ಬಳಗವು 16 ಅಂಕಗಳನ್ನು ಗಳಿಸಿದೆ. ಆದ್ದರಿಂದ ಹೆಚ್ಚು ಆತಂಕವಿಲ್ಲ. ಆದರೆ, ಮುಂಬೈ ತಂಡವು  ಹತ್ತು ಪಂದ್ಯಗಳಲ್ಲಿ ಆರು ಗೆದ್ದು, ನಾಲ್ಕರಲ್ಲಿ ಸೋತಿದೆ. 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ (10 ಅಂಕ) ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ (10 ಅಂಕ) ತಂಡಗಳಿಂದ ಮುಂಬೈ ತೀವ್ರ ಪೈಪೋಟಿ ಎದುರಿಸುತ್ತಿದೆ. ಆದ್ದರಿಂದ ಈ ಪಂದ್ಯದಲ್ಲಿ ಗೆದ್ದರೆ ತುಸು ನಿರಾಳವಾಗಹುದು.

ಚೆನ್ನೈ ತಂಡವು ಚೆಪಾಕ್ ಅಂಗಳದಲ್ಲಿ ಮಣಿಸುವುದು ಕಠಿಣ ಸವಾಲು. ಸತತ ವೈಫಲ್ಯದ ನಂತರ ಫಾರ್ಮ್‌ಗೆ ಮರಳಿರುವ ಶೇನ್ ವ್ಯಾಟ್ಸನ್, ಸುರೇಶ್ ರೈಆನ, ಅಂಬಟಿ ರಾಯುಡು, ಫಾಫ್ ಡುಪ್ಲೆಸಿ ಮತ್ತು ನಾಯಕ ಮಹೇಂದ್ರಸಿಂಗ್ ಧೋನಿ ಅವರ ಬ್ಯಾಟಿಂಗ್ ಬಲವನ್ನು ಹತ್ತಿಕ್ಕುವುದು ಮುಂಬೈ ಮುಂದಿರುವ ಪ್ರಮುಖ ಸವಾಲು.

ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ನೈಜ ಆಟಕ್ಕೆ ಇನ್ನೂ ಮರಳಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ,  ಕೃಣಾಲ್, ಯುವರಾಜಸಿಂಗ್ ಮತ್ತು ಕೀರನ್ ಪೊಲಾರ್ಡ್‌ ಅವರ ಮೇಲೆ ನಿರೀಕ್ಷೆ ಇಡಬಹುದು. ಜಸ್‌ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ ಅವರು ಉತ್ತಮ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕುವ ಸಮರ್ಥರಾಗಿದ್ದಾರೆ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್:  ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿ,  ಮುರಳಿ ವಿಜಯ್, ಕೇದಾರ್ ಜಾಧವ್, ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜ, ಧ್ರುವ್ ಶೋರೆ, ಚೈತನ್ಯ ಬಿಷ್ಣೊಯ್, ರಿತುರಾಜ್ ಗಾಯಕವಾಡ, ಡ್ವೇನ್ ಬ್ರಾವೊ, ಕರ್ಣ ಶರ್ಮಾ, ಇಮ್ರಾನ್ ತಾಹೀರ್, ಹರಭಜನ್ ಸಿಂಗ್, ಮಿಚೆಲ್ ಸ್ಯಾಂಟನರ್, ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ಕೆ.ಎಂ. ಆಸಿಫ್, ದೀಪಕ್ ಚಾಹರ್, ಎನ್. ಜಗದೀಶನ್ (ವಿಕೆಟ್‌ಕೀಪರ್), ಸ್ಕಾಟ್ ಕಗ್ಲೇಜಿನ್.

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ,  ಕೃಣಾಲ್ ಪಾಂಡ್ಯ, ಮಿಚೆಲ್ ಮೆಕ್ಲೆಂಗಾನ್, ಜೇಸನ್ ಬೆಹ್ರೆನ್‌ಡಾರ್ಫ್, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್, ಜಸ್‌ಪ್ರೀತ್ ಬೂಮ್ರಾ, ಅನ್ಮೋಲ್‌ಪ್ರೀತ್ ಸಿಂಗ್, ಸಿದ್ಧೇಶ್ ಲಾಡ್, ಅನಕೂಲ್ ರಾಯ್, ಇವಿನ್ ಲೂಯಿಸ್, ಪಂಕಜ್ ಜೈಸ್ವಾಲ್, ಬೆನ್ ಕಟಿಂಗ್, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಮ್, ಬರಿಂದರ್ ಸ್ರಾನ್, ಜಯಂತ್ ಯಾದವ್, ಬೇರನ್ ಹೆನ್ರಿಕ್ಸ್.

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !