ಶುಕ್ರವಾರ, ಜನವರಿ 22, 2021
27 °C
ಪಂಜಾಬ್ ಕಿಂಗ್ಸ್‌ ಇಲೆವನ್‌ಗೆ ಪುಟಿದೇಳುವ ವಿಶ್ವಾಸ

ಸನ್‌ರೈಸರ್ಸ್‌ ಹೈದರಾಬಾದ್‌ಗೆ ಸತ್ವಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ):  ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಗಳ ನಡುವಣ ಪಂದ್ಯ ನಡೆಯಲಿದೆ.

ಎರಡೂ ತಂಡಗಳು ತಲಾ ಹತ್ತು ಅಂಕಗಳಿಸಿವೆ. 11 ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿವೆ, ಆರರಲ್ಲಿ ಸೋತಿವೆ. ಆದರೆ, ಸನ್‌ರೈಸರ್ಸ್‌ ತಂಡವು (+0.559) ಕಿಂಗ್ಸ್‌ ತಂಡಕ್ಕಿಂತ (–0.117) ಉತ್ತಮ ರನ್‌ರೇಟ್ ಹೊಂದಿದೆ. ಆದ್ದರಿಂದ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೆಸ್ಟೊ ತಮ್ಮ ತವರಿಗೆ ಮರಳಿರುವುದರಿಂದ ಡೇವಿಡ್ ವಾರ್ನರ್‌ ಮೇಲೆ ಹೆಚ್ಚು ಒತ್ತಡವಿದೆ. ಕೇನ್ ವಿಲಿಯಮ್ಸನ್ ಇನ್ನೂ ಹೊಸ ಚೆಂಡು ಎದುರಿಸುವ ತಂತ್ರಕ್ಕೆ ಹೊಂದಿಕೊಳ್ಳಬೇಕಿದೆ. ಮನೀಷ್ ಪಾಂಡೆ ಉತ್ತಮ ಲಯದಲ್ಲಿದ್ದಾರೆ. ವಾರ್ನರ್ ಮತ್ತು ಪಾಂಡೆಯವರ ಉತ್ತಮ ಆಟದ ಬಲವಿದ್ದರೂ ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್‌ ಎದುರು ಸೋತಿತ್ತು.  ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಶಕೀಬ್ ಅಲ್ ಹಸನ್ ಮತ್ತು  ರಶೀದ್ ಖಾನ್ ಅವರ ಬೌಲಿಂಗ್ ಬಲ ತಂಡಕ್ಕೆ ಇದೆ.  ಕಿಂಗ್ಸ್ ತಂಡದ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಅವರನ್ನು ಕಟ್ಟಿಹಾಕುವ ಸವಾಲು ಅವರ ಮುಂದಿದೆ.

ಅಶ್ವಿನ್ ನಾಯಕತ್ವದ ಕಿಂಗ್ಸ್‌ ತಂಡದ ಪ್ಲೇ ಆಫ್ ಪ್ರವೇಶದ ಹಾದಿಯೂ ದುರ್ಗಮವಾಗಿದೆ. ತನ್ನ ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶವನ್ನು ನಿರೀಕ್ಷಿಸಬಹುದು. ಆದರೆ, ಆ ಪಂದ್ಯಗಳಲ್ಲಿ ಸನ್‌ರೈಸರ್ಸ್‌, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು  ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳನ್ನು ಎದುರಿಸಬೇಕು. ಒಳ್ಳೆಯ ರನ್‌ರೇಟ್‌ನೊಂದಿಗೆ ಜಯಿಸಬೇಕು. ಆದ್ದರಿಂದ ಈ ಪಂದ್ಯವು ಇಬ್ಬರಿಗೂ ಮಹತ್ವದ್ದಾಗಿದೆ.

ತಂಡಗಳು: ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಬಾಸಿಲ್ ಥಂಪಿ, ಭುವನೇಶ್ವರ ಕುಮಾರ್, ದೀಪಕ್ ಹೂಡಾ, ಮನೀಷ್ ಪಾಂಡೆ, ಟಿ. ನಟರಾಜನ್, ರಿಕಿ ಭುಯ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಶ್ರೀವತ್ಸ ಗೋಸ್ವಾಮಿ, ಖಲೀಲ್ ಅಹಮದ್, ಯೂಸುಫ್ ಪಠಾಣ್, ಬಿಲ್ಲಿ ಸ್ಟಾನ್‌ಲೇಕ್, ಡೇವಿಡ್ ವಾರ್ನರ್, ರಶೀದ್ ಖಾನ್, ಮೊಹಮ್ಮದ್ ನಬಿ, ಶಕೀಬ್ ಅಲ್ ಹಸನ್,  ವೃದ್ಧಿಮಾನ್ ಸಹಾ, ಮಾರ್ಟಿನ್ ಗಪ್ಟಿಲ್, ವಿಜಯಶಂಕರ್, ಅಭಿಷೇಕ್ ಶರ್ಮಾ, ಶಾಬಾಜ್ ನದೀಂ.

ಕಿಂಗ್ಸ್‌ ಇಲೆವನ್ ಪಂಜಾಬ್: ಆರ್. ಅಶ್ವಿನ್ (ನಾಯಕ), ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್ (ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನದೀಪ್ ಸಿಂಗ್, ಸ್ಯಾಮ್ ಕರನ್, ಆ್ಯಂಡ್ರ್ಯೂ ಟೈ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರೆಹಮಾನ್, ಕರುಣ್ ನಾಯರ್, ಮೊಸೆಸ್ ಹೆನ್ರಿಕ್ಸ್‌, ವರುಣ್ ಚಕ್ರವರ್ತಿ, ಹರಪ್ರೀತ್ ಬ್ರಾರ್, ಸಿಮ್ರನ್ ಸಿಂಗ್, ಹಾರ್ಡಸ್ ವಿಜೊನ್, ಅಂಕಿತ್ ರಜಪೂತ್, ಅರ್ಷದೀಪ್ ಸಿಂಗ್, ದರ್ಶನ್ ನಾಲ್ಕಂಡೆ, ಅಗ್ನಿವೇಶ್ ಆಯಾಚಿ.

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು