ಗುರುವಾರ , ಸೆಪ್ಟೆಂಬರ್ 19, 2019
29 °C

ವಾಹನ ಚಲಾಯಿಸುವಾಗ ಹೃದಯಾಘಾತದಿಂದ ತಂದೆ ಸಾವು: ಅಪಘಾತ ತಪ್ಪಿಸಿದ 8 ವರ್ಷದ ಪುತ್ರ

Published:
Updated:

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪಟ್ಟಣದ ಎಪಿಎಂಸಿ ಬಳಿ ವಾಹನ ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. 

ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ವ್ಯಕ್ತಿ ಟಾಟಾ ಏಸ್‌ ವಾಹನವನ್ನು ಓಡಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ತಂದೆ ಪಕ್ಕದಲ್ಲೇ ಕುಳತಿದ್ದ 8 ವರ್ಷದ ಮಗ ತಂದೆಯ ಅಸ್ವಸ್ಥ ಸ್ಥಿತಿ ಕಂಡು, ಸ್ಟೇರಿಂಗ್ ಹಿಡಿದು ವಾಹನವನ್ನು ರಸ್ತೆ ಪಕ್ಕದ ದಿಣ್ಣೆಯ ಕಡೆ ತಿರುಗಿಸಿ ಅಪಾಯ ತಪ್ಪಿಸಿದ್ದಾನೆ. ಸಾರ್ವಜನಿಕರು ಚಾಲಕನನ್ನು ಆಸ್ಪತ್ರೆಗೆ ಸೇರಿದ್ದಾರೆ. 

ವಾಹನದಲ್ಲಿ ಮಿಕ್ಸಿಗಳನ್ನು ಸಾಗಿಸಲಾಗುತ್ತಿತ್ತು. 

Post Comments (+)