ಗುಳೇಗುಡ್ಡ ರೈಲು ನಿಲ್ದಾಣದ ಸುತ್ತ ಹನಿ ನೀರಿಗೂ ನಿತ್ಯ ಇಲ್ಲಿ ತತ್ವಾರ!

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನೀರು ಕೊಡಲು ನಿವಾಸಿಗಳ ಒತ್ತಾಯ

ಗುಳೇಗುಡ್ಡ ರೈಲು ನಿಲ್ದಾಣದ ಸುತ್ತ ಹನಿ ನೀರಿಗೂ ನಿತ್ಯ ಇಲ್ಲಿ ತತ್ವಾರ!

Published:
Updated:
Prajavani

ಗುಳೇದಗುಡ್ಡ ರೈಲು ನಿಲ್ದಾಣ: ಒಂದೆಡೆ ಬೇಸಿಗೆ ಬಿಸಿಲ ಝಳಕ್ಕೆ ಗಂಟಲು ಪಸೆ ಕ್ಷಣ ಕ್ಷಣಕ್ಕೂ ಆರುತ್ತದೆ. ಇನ್ನೊಂದೆಡೆ ಕುಡಿಯೋಣ ಎಂದರೆ ಹನಿ ನೀರು ಸಿಗಲೊಲ್ಲದು.

ಬಾಯಾರಿಕೆ ನೀಗಿಸಿಕೊಳ್ಳಲು ಇಡೀ ದಿನ ಅಡ್ಡಾಡಿದರೂ ಒಂದು ಕೊಡ ನೀರು ಸಿಗುವುದು ದುಸ್ತರ. ಇದು ಬಾದಾಮಿ ತಾಲ್ಲೂಕಿನ ಗುಳೇಗುಡ್ಡ ರೈಲು ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿನ ಕುಡಿಯುವ ನೀರಿಗೆ ತತ್ವಾರದ ಗಂಭೀರತೆ ಚಿತ್ರಣ.

ರೈಲು ನಿಲ್ದಾಣದ ಸುತ್ತಲೂ ಸುಮಾರು 200ಕ್ಕೂ ಹೆಚ್ಚು ಮನೆಗಳ ವಸತಿ ಪ್ರದೇಶವಿದೆ. ಜೊತೆಗೆ ಇಲ್ಲಿನ ಇಟ್ಟಿಗೆ ಭಟ್ಟಿಗಳಲ್ಲಿ ನಿತ್ಯ ಹೊರಗಿನಿಂದ ಬರುವ ನೂರಾರು ಕಾರ್ಮಿಕರು ದುಡಿಯುತ್ತಾರೆ. ಆದರೆ ಕಳೆದೊಂದು ತಿಂಗಳಿನಿಂದ ಇಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಏರ್ಪಟ್ಟಿದೆ. ವಿಶೇಷವೆಂದರೆ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರೂ ನೀರಿಗಾಗಿ ಪಡಿಪಾಟಲು ಪಡಬೇಕಾಗಿದೆ.

ಅಲ್ಲಿ ಇಲ್ಲಿ ಅರಸಿ, ಸುತ್ತಲಿನ ಹೊಲ–ಮನೆಗಳಿಗೆ ತೆರಳಿ ಅವರ ಮನವೊಲಿಸಿ ನೀರು ತರುವುದೇ ಇಲ್ಲಿನ ನಿವಾಸಿಗಳಿಗೆ ನಿತ್ಯದ ದೊಡ್ಡ ಕಾಯಕವಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ತಳ್ಳುಗಾಡಿಗಳಲ್ಲಿ ಕೊಡಗಳ ತುಂಬಿಕೊಂಡು ಓಡಾಡುವುದೇ ನಿತ್ಯದ ದಿನಚರಿ. ಈ ಬಗ್ಗೆ ಹಲವು ಬಾರಿ ಕೆಲವಡಿ ಗ್ರಾಮ ಪಂಚಾಯ್ತಿ ಗಮನ ಸೆಳೆದರೂ ಏನೂ ಉಪಯೋಗವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

‘ಒಂದೊಂದು ಕೊಡ ನೀರಿಗೂ ಊರಿನ ಜನಕ್ಕೆ ನೀರಿನ ತಾಪ ಇದೆ. ನೀರು ಪೂರೈಸಿದರೆ ನಾವು ಬಡ–ಬಗ್ಗರು ಬದುಕುತ್ತೇವೆ. ಇಲ್ಲದಿದ್ದರೆ ನಮ್ಮ ಗತಿ ದೇವರಿಗೆ ಪ್ರೀತಿ. ಬರೋಬ್ಬರಿ ಒಂದು ತಿಂಗಳು ಮೇಲಾಗಿದೆ. ನೀರು ಕಳಿಸಲು ಹೇಳಿ ಒಂದಷ್ಟು ಪುಣ್ಯ ಬರುತ್ತದೆ ನಿಮಗೆ’ ಎಂದು ಪಾರ್ವತೆವ್ವ ಭಜಂತ್ರಿ ‘ಪ್ರಜಾವಾಣಿ’ ಎದುರು ಅಲವತ್ತುಕೊಂಡರು.

‘ಟ್ಯಾಂಕರ್ ನೀರು ಎಂದು ಹೋಗಿದೆಯೋ ಅಲ್ಲಿಂದಲೂ ಇದೇ ತೊಂದರೆ. ಯಾರೂ ಏನೂ ಮಾಡಲೊಲ್ಲರು’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !