ಮಳೆಯಲ್ಲಿ ಮಿನುಗಿದ ‘ಹ್ಯಾಟ್ರಿಕ್ ವೀರ’

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮಳೆಯಲ್ಲಿ ಮಿನುಗಿದ ‘ಹ್ಯಾಟ್ರಿಕ್ ವೀರ’

Published:
Updated:
Prajavani

ಬೆಂಗಳೂರು: ‘ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಅವರಂತಹ ದಿಗ್ಗಜರ ವಿಕೆಟ್ ಪಡೆಯುವುದು ಸುಲಭವಲ್ಲ. ಆದರೆ ಈ ಟೂರ್ನಿಯಲ್ಲಿ ಎರಡು ಬಾರಿ ಆ ಸಾಧನೆ ಮಾಡಿರುವುದು ಖುಷಿ ತಂದಿದೆ’–

ಮಂಗಳವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ನಡುವೆ ‘ಹ್ಯಾಟ್ರಿಕ್‌’ ಸಾಧನೆ ಮಾಡಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿರುವ ಕನ್ನಡಿಗ ಶ್ರೇಯಸ್ ಗೋಪಾಲ್ ಅವರ ಹೆಮ್ಮಯ ನುಡಿಗಳು ಇವು.

ರಭಸದ ಮಳೆ–ಗಾಳಿಯಿಂದಾಗಿ ಫೈವ್–5 ಓವರ್‌ಗಳ ಪಂದ್ಯವನ್ನು ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ  ಆರ್‌ಸಿಬಿಯು ವಿರಾಟ್ ಕೊಹ್ಲಿ (25; 7ಎಸೆತ, 1ಬೌಂಡರಿ, 3ಸಿಕ್ಸರ್) ಆಟದಿಂದ 5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 62 ರನ್‌ ಗಳಿಸಿತು. ಶ್ರೇಯಸ್ ಗೋಪಾಲ್ ಎರಡನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡವು 3.2 ಓವರ್‌ಗಳಲ್ಲಿ 1 ವಿಕೆಟ್‌ಗೆ 41 ರನ್‌ ಗಳಿಸಿದ್ದ ಸಂದರ್ಭದಲ್ಲಿ ಮತ್ತೆ ಮಳೆ ಆರಂಭವಾಯಿತು. ಆದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಿ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್, ‘ಇಂತಹ ಅವಕಾಶಗಳು ಪದೇ ಪದೇ ಸಿಗುವುದಿಲ್ಲ. ಆದರೆ ನಾನು ಅದೃಷ್ಟವಂತ. ಇದೇ ಟೂರ್ನಿಯಲ್ಲಿ ಎರಡು ಬಾರಿ ದಿಗ್ಗಜ ಜೋಡಿಯ ವಿಕೆಟ್ ಪಡೆದೆ. ಮುಂದೆಯೂ ಇದೇ ರೀತಿಯ ಅವಕಾಶಗಳು ಸಿಗಬಹುದು ಎಂಬ ಮಹತ್ವಾಕಾಂಕ್ಷೆ ಇದೆ’ ಎಂದರು.

‘ನನ್ನ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಕೊಹ್ಲಿ ಕ್ರಮವಾಗಿ ಸಿಕ್ಸರ್, ಬೌಂಡರಿ ಮತ್ತು ಎರಡು ರನ್‌ ಹೊಡೆದಾಗ ಗಾಬರಿಯಾಗಿದ್ದೆ. ಆದರೂ ವಿಶ್ವಾಸದಿಂದ ಆಡಿದ್ದು ಫಲ ನೀಡಿತು. ಜೈಪುರದಲ್ಲಿಯೂ ಇದೇ ರೀತಿ ಅವರಿಬ್ಬರ ವಿಕೆಟ್ ಸಂಪಾದಿಸಿದ್ದೆ’ ಎಂದರು.

‘ಅಂದು ಜೈಪುರದ ಪಂದ್ಯದಲ್ಲಿ ಗೂಗ್ಲಿ ಹಾಕಿ ವಿರಾಟ್ ಮತ್ತು ಎಬಿಡಿ ವಿಕೆಟ್ ಪಡೆದಿದ್ದೆ. ಅದೇನೂ ಪೂರ್ವನಿಯೋಜಿತವಾಗಿರಲಿಲ್ಲ. ಆದರೆ ಮನಸ್ಸು ಹೇಳಿದ್ದ ಮಾತನ್ನು ಕೇಳಿದ್ದೆ’ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !