ನಗರಸಭೆಗೆ ಸ್ಪರ್ಧೆ ಖಚಿತ: ಸೈಯದ್ ಅಮಾನುಲ್ಲಾ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನಗರಸಭೆಗೆ ಸ್ಪರ್ಧೆ ಖಚಿತ: ಸೈಯದ್ ಅಮಾನುಲ್ಲಾ

Published:
Updated:

ತಿಪಟೂರು: ನಗರಸಭೆ ಚುನವಣೆಯಲ್ಲಿ 25ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ನಗರಸಭೆ ಮಾಜಿ ಸದಸ್ಯ ಸೈಯದ್ ಅಮಾನುಲ್ಲಾ ತಿಳಿಸಿದರು.

ನಗರದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಅವಧಿಯಲ್ಲಿ 21ನೇ ವಾರ್ಡ್ ಸದಸ್ಯನಾಗಿ ಜನಪರ ಕೆಲಸ ಮಾಡಿದ್ದೇನೆ. ಆ ವಾರ್ಡ್‍ನ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಹಲವಾರು ಕೆಲಸಗಳಾಗಿವೆ. ಈಗ ಮೀಸಲು ಬದಲಾದ್ದರಿಂದ 25ನೇ ವಾರ್ಡ್‍ನಿಂದ ಸ್ಪರ್ಧಿಸಲು ಆಸಕ್ತನಾಗಿದ್ದೇನೆ. ಆದರೆ ಕೆಲವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ರಂಜಾನ್ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ನಾನು ಮೆಕ್ಕಾ ಮದೀನ ಯಾತ್ರೆ ಕೈಗೊಳ್ಳುತ್ತಿದ್ದೆ. ಈ ಬಾರಿಯೂ ನಾನು ಮೆಕ್ಕಾ ಹೋಗುವುದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಕುತಂತ್ರ ನಡೆಯುತ್ತಿವೆ. 25ನೇ ವಾರ್ಡ್‍ನಲ್ಲಿ ಈಗಾಗಲೇ ಕ್ಷೇತ್ರ ಸಂಚಾರ ಕೈಗೊಂಡಿದ್ದೇನೆ. ನಾನು ಚುನಾವಣೆ ಸಮಯದಲ್ಲಿ ಮೆಕ್ಕಾಗೆ ಹೋಗುವುದಿಲ್ಲ. ಚುನಾವಣೆ ನಂತರ ಯಾತ್ರೆ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

‘ಕಾಂಗ್ರೆಸ್‍ನಿಂದ ಈ ವಾರ್ಡ್‍ಗೆ ಸ್ಪರ್ಧಿಸುವುದು ಖಚಿತ. ಕಳೆದ ಅವಧಿಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಆಗಿನ ಶಾಸಕ ಕೆ.ಷಡಕ್ಷರಿ ಸಹಕಾರ ನೀಡಿದ್ದರು. ಈ ಬಾರಿಯೂ ಅವರು ನನ್ನ ಬೆಂಬಲಕ್ಕೆ ಇರುತ್ತಾರೆ. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣ ಇದೆ’ ಎಂದು ತಿಳಿಸಿದರು.

ವಾರ್ಡ್‍ನ ಮುಖಂಡರಾದ ಸೈಯದ್ ಜಿಲಾನಿ, ರೆಹಮತ್ತುಲ್ಲಾ, ಮೊಹಮದ್ ಸೈಯದ್ ಮೆಹಬೂಬ್, ಅಫೀಸ್, ಹಿದಾಯಿತ್ ಉಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !