ಮಂಗಳವಾರ, ಸೆಪ್ಟೆಂಬರ್ 21, 2021
25 °C

‘ಬಾಲ್ಯಜೀವನ ಸ್ವರ್ಗವಿದ್ದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿನಗರ: ‘ಬಾಲ್ಯ ಜೀವನವು ಸ್ವರ್ಗವಿದ್ದಂತೆ. ಮಕ್ಕಳ ಮನಸ್ಸು ಶುಭ್ರ ಮತ್ತು ಸ್ವಚ್ಛವಾಗಿರುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದರು. 

ಜ್ಞಾನಭಾರತಿ ವಾರ್ಡ್‍ನ ಐಟಿಐ ಬಡಾವಣೆಯ ಹಾರಕೂಡೆ ಕುಠೀರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಹೆಜ್ಜೆ ಹಾಕಿ ಕುಣಿದರೆ ಅದು ಸಂಭ್ರಮ. ಹಾಡಿದರೆ ಇನ್ನೂ ಚೆಂದ, ಮಾತನಾಡುವುದನ್ನು ಆಲಿಸುವುದೆ ಒಂದು ಸೊಗಸು’ ಎಂದು ಬಣ್ಣಿಸಿದರು. 

‘ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 200 ಶಾಲೆಗಳಿಗೆ ಭೇಟಿನೀಡಿ, ವಚನ ತರಗತಿ ನಡೆಸಲಾಗುವುದು’ ಎಂದರು. ಶಿಬಿರದ ನಿರ್ದೇಶಕಿ ಮೀನಾಕ್ಷಿ ಮೇಟಿ, ವಾಸ್ತುಶಿಲ್ಪಿ ಚಂದ್ರಿಕಾ ಗುರುಪ್ರಸಾದ್ ಚಿಣ್ಣರಿಗೆ ಪ್ರಶಂಸಾಪತ್ರ ವಿತರಿಸಿದರು.

ಯುವ ಸಮೂಹ ಆದರ್ಶಗಳನ್ನು ಪಾಲಿಸಬೇಕು

ಕೆ.ಆರ್.ಪುರ: ‘ಅಂಬೇಡ್ಕರ್‌ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್‌ ಅವರ ಆದರ್ಶಗಳನ್ನು ಇಂದಿನ ಯುವ ಜನರು ತಪ್ಪದೇ ಪಾಲಿಸಬೇಕು’ ಎಂದು ಸಹ ಪ್ರಾಧ್ಯಾಪಕ ಸಿ.ಜೆ.ಲಕ್ಷ್ಮೀಪತಿ ಹೇಳಿದರು. 

ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಮಹನಿಯರ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಜೀವನದುದ್ದಕ್ಕೂ ಅವಮಾನಗಳನ್ನು ಎದುರಿಸಿದ ಅಂಬೇಡ್ಕರ್‌ ಅವರು ಸಮಾಜದ ಏಳಿಗೆಗಾಗಿ ದುಡಿದರು. ಸಂವಿಧಾನದ ಮೂಲಕ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದರು. ಅವರ ಚಿಂತನೆ ಪಾಲಿಸಿ, ದೇಶದ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಬೇಕು’ ಎಂದರು. 

‘ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರೂ ಜಗಜೀವನ್‌ ರಾಮ್‌ ಪ್ರಚಾರ ಬಯಸಲಿಲ್ಲ. ಅವರು ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು