ಫೋನಿ ಚಂಡಮಾರುತಐದು ರೈಲುಗಳ ಸಂಚಾರ ಸ್ಥಗಿತ

ಬೆಂಗಳೂರು: ಬೆಂಗಳೂರಿಗೆ ಬರಬೇಕಿದ್ದ ಮತ್ತು ಇಲ್ಲಿಂದ ತೆರಳಬೇಕಿದ್ದ 5 ರೈಲುಗಳ ಸಂಚಾರವನ್ನು ಫೋನಿ ಚಂಡಮಾರುತದಿಂದಾಗಿ ರದ್ದುಪಡಿಸಲಾಗಿದೆ.
ಶುಕ್ರವಾರ ಹೊರಡಬೇಕಿದ್ದ 12864 ಸಂಖ್ಯೆಯ ಯಶವಂತಪುರ–ಹೌರಾ, ಬೆಂಗಳೂರು ಕಂಟೋನ್ಮೆಂಟ್–ಗುವಾಹಟಿ ರೈಲು (12509) ಸಂಚಾರವನ್ನು ರದ್ದು ಮಾಡಲಾಗಿದೆ.
ಶನಿವಾರ ಸಂಚರಿಸಬೇಕಿದ್ದ ಹೌರಾ–ವಾಸ್ಕೋಡಗಾಮ (18047), ಹೌರಾ–ಯಶವಂತಪುರ (12863), ಹೌರಾ– ಯಶವಂತಪುರ (12245) ರೈಲು ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.