ಸೋಮವಾರ, ಸೆಪ್ಟೆಂಬರ್ 16, 2019
21 °C
ಕಸ್ಟಮ್ಸ್ ಅಧಿಕಾರಿಗಳಿಂದ ಪ್ರಯಾಣಿಕ ವಶಕ್ಕೆ

₹ 1.19 ಕೋಟಿ ಮೊತ್ತದ ಚಿನ್ನಾಭರಣ ಜಪ್ತಿ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನಾಭರಣ ಸಾಗಣೆ ಮಾಡುತ್ತಿದ್ದ ಆರೋಪದಡಿ ಪ್ರಯಾಣಿಕರೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ದುಬೈನಿಂದ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನ ಬಳಿ ₹1.19 ಕೋಟಿ ಮೊತ್ತದ ಚಿನ್ನಾಭರಣ ಸಿಕ್ಕಿದೆ’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಚಾಮರಾಜನಗರದ ನಿವಾಸಿಯಾದ ಆರೋಪಿ, ಇತ್ತೀಚೆಗಷ್ಟೇ ದುಬೈಗೆ ಹೋಗಿದ್ದ. ವಾಪಸ್‌ ಬರುವಾಗ 7.6 ಕೆ.ಜಿ ತೂಕದ ಕಬ್ಬಿಣದ ಉಪಕರಣದ ನಡುವೆ ಚಿನ್ನಾಭರಣವನ್ನು ಬಚ್ಚಿಟ್ಟುಕೊಂಡು ಬಂದಿದ್ದ.’

‘ಪ್ರಯಾಣಿಕನ ಬಳಿ ಚಿನ್ನವಿರುವುದು ನಿಲ್ದಾಣದಲ್ಲಿದ್ದ ಲೋಹ ಶೋಧಕದಿಂದ ಗೊತ್ತಾಯಿತು. ಹೆಚ್ಚಿನ ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆಯಾದವು. ಅವುಗಳನ್ನು ಆತ ಎಲ್ಲಿಂದ ತಂದಿದ್ದ ಹಾಗೂ ಎಲ್ಲಿಗೆ ತೆಗೆದುಕೊಂಡು ಹೊರಟಿದ್ದ ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ’ ಎಂದು ಅಧಿಕಾರಿ ಹೇಳಿದರು.

Post Comments (+)