ಎಸಿಬಿ ದಾಳಿ ಬಳಿಕ ಕಡತಗಳಿಗೆ ಬೆಂಕಿ

ಸೋಮವಾರ, ಮೇ 20, 2019
30 °C
ಮಹದೇವಪುರ ವಲಯದ ಪಾಲಿಕೆ ಕಚೇರಿ

ಎಸಿಬಿ ದಾಳಿ ಬಳಿಕ ಕಡತಗಳಿಗೆ ಬೆಂಕಿ

Published:
Updated:
Prajavani

ವೈಟ್‌ಫೀಲ್ಡ್‌: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬೆಳ್ಳಂದೂರು ಉಪ ವಲಯ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡು ಕಡತಗಳು ಸುಟ್ಟು ಹೋಗಿವೆ.

ಮಹದೇವಪುರ ವಲಯದ ಬೆಳ್ಳಂದೂರು ಕಚೇರಿಯ ಎಂಜಿನಿಯರಿಂಗ್‌ ಕೊಠಡಿಯಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಸ್ಥಳೀಯರು ಕೂಡಲೇ ಪಾಲಿಕೆ ಸಿಬ್ಬಂದಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು. ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಮಹದೇವಪುರ ವಲಯದ ಪಾಲಿಕೆ ಕಚೇರಿ ಮೇಲೆ ಕೆಲವು ದಿನಗಳ ಹಿಂದೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಟಿಡಿಆರ್‌ ನೀಡುವ ವಿಚಾರದಲ್ಲಿ ಎಂಜಿನಿಯರ್‌ ಸುರೇಶ್‌ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೆ ಉಪ ವಲಯ ಕಚೇರಿಯಲ್ಲಿ ಬೆಂಕಿ ಬಿದ್ದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ವಿದ್ಯುತ್‌  ಶಾರ್ಟ್‌ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡ ನಿರ್ಮಾಣದ ಮಂಜೂರಾತಿಯ ಕಡತಗಳು ಸುಟ್ಟು ಹೋಗಿವೆ ಎನ್ನಲಾಗುತ್ತಿದೆ. ಕಚೇರಿಯಲ್ಲಿನ ಪೀಠೋಪಕರಣಗಳು ಸಹ ಸುಟ್ಟುಹೋಗಿವೆ. ಈ ಕುರಿತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌, ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಳ್ಳಂದೂರು ಉಪವಲಯ ಕಚೇರಿಯ ನೆಲ ಮಹಡಿಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯರ ಕಚೇರಿಯಿದೆ. ಮೊದಲ ಮಹಡಿಯಲ್ಲಿನ ನಾಡಕಚೇರಿಗೆ ಹೊಂದಿಕೊಂಡಂತೆ ಎಂಜಿನಿಯರಿಂಗ್ ಕೊಠಡಿಯಿದೆ. ಎಂಜಿನಿಯರಿಂಗ್ ಕೊಠಡಿಯಲ್ಲಿ ಕೆಲವು ದಿನಗಳ ಹಿಂದೆ ಹೊಸದಾಗಿ ವೈರಿಂಗ್ ಮಾಡಿಸಲಾಗಿತ್ತು. ಅದರೂ ಎಂಜಿನಿಯರಿಂಗ್ ಕೊಠಡಿಗೆ ಮಾತ್ರ ಬೆಂಕಿಬಿದ್ದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !