ಭಾನುವಾರ, ಸೆಪ್ಟೆಂಬರ್ 22, 2019
23 °C

ಸಿ.ಎಂ ಕೇಜ್ರಿವಾಲ್‌ಗೆ ಕಪಾಳಮೋಕ್ಷ

Published:
Updated:
Prajavani

ನವದೆಹಲಿ: ಇಲ್ಲಿನ ಮೋತಿನಗರದಲ್ಲಿ ಚುನಾವಣಾ ರೋಡ್‌ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ವ್ಯಕ್ತಿಯೊಬ್ಬರು ಶನಿವಾರ ಕಪಾಳಮೋಕ್ಷ ನಡೆಸಿದ್ದಾರೆ. ಕೇಜ್ರಿವಾಲ್ ಅವರು ತೆರೆದ ಜೀಪ್‌ನಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಜೀಪ್‌ ಮೇಲೆ ಏರಿ ಬಂದು ಅವರನ್ನು ಥಳಿಸಿದ್ದಾನೆ.

ಥಳಿಸಿದ ವ್ಯಕ್ತಿಯನ್ನು 33 ವರ್ಷ ವಯಸ್ಸಿನ ಸುರೇಶ್ ಎಂದು ಗುರುತಿಸಿಸಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಎಎಪಿ ಕಾರ್ಯಕರ್ತರು ಹಿಡಿದು ಜೀಪ್‌ನಿಂದ ಕೆಳಗಿಳಿಸಿದರು. ನಂತರ ಪೊಲೀಸರು ವಶಕ್ಕೆ ನೀಡಿದರು.

Post Comments (+)