ಹಣ ಡಬ್ಲಿಂಗ್ ತಂಡದ ಬಂಧನ

ಸೋಮವಾರ, ಮೇ 27, 2019
21 °C

ಹಣ ಡಬ್ಲಿಂಗ್ ತಂಡದ ಬಂಧನ

Published:
Updated:

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಹಣ ದುಪ್ಪಟ್ಟು ಮಾಡುವ ಭರವಸೆ ನೀಡಿ ವಂಚಿಸುತ್ತಿದ್ದ ಐದು ಜನರ ತಂಡವನ್ನು ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

₹1 ನೀಡಿದರೆ ₹2ರಿಂದ 3ಲಕ್ಷ ನೀಡುವುದಾಗಿ ಜನರನ್ನು ನಂಬಿಸಿ ಪಂಗನಾಮ ಹಾಕುತ್ತಿದ್ದ ವಂಚಕರ ಗುಂಪನ್ನು ಬಂಧಿಸಿ, ಅವರಿಂದ ₹1.78 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಮುರುಗಮಲ್ಲ ಗ್ರಾಮ ಕಾಂತಮ್ಮ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದೇವರಕೊಂಡದ ಇಡಗುಟ್ಟ ಕೇಶವ, ಚಂದ್ರಶೇಖರ್, ಕದಿರಿಯ ನಿಜಾಮ್ ಕಾಲೊನಿಯ ಕೇಶವ, ಶಿಡ್ಲಘಟ್ಟದ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುರುಗಮಲ್ಲ ಗ್ರಾಮದ ಭಾರ್ಗವೇಂದ್ರ ಅವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ 5.5 ಲಕ್ಷ ರೂ ಪಡೆದು ಪಂಗನಾಮ ಹಾಕಿದ್ದರು. ಸಬೂಬುಗಳನ್ನು ಹೇಳುತ್ತಿದ್ದರಿಂದ ಹಣ ಕಳೆದುಕೊಂಡ ಅನುಮಾನ ಬಲವಾಯಿತು. ಭಾರ್ಗವೇಂದ್ರ ಕೆಂಚಾರ್ಲಹಳ್ಳಿ ಠಾಣೆಗೆ ದೂರು ನೀಡಿದ್ದರು.

ಭಾರ್ಗವ ಅವರಿಂದ ಮಾಹಿತಿ ಪಡೆದ ಪೊಲೀಸರು ತಂಡದ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ನಕಲಿ ಹೆಸರುಗಳಿಂದ ಮನಿ ಡಬ್ಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯ, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲೂ ತಮ್ಮ ಕೈಚಳಕವನ್ನು ತೋರಿದ್ದಾರೆ. ವಿಚಾರಣೆಯ ನಂತರ ಇನ್ನೂ ಹಲವಾರು ಪ್ರಕರಣಗಳು ಪತ್ತೆಯಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಶ್ರೀನಿವಾಸ್. ಸಿಪಿಐ ನಯಾಜ್ ಬೇಗ್, ಪಿಎಸ್‌ಐ ವಿಕಾಸ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !