ಸೋಮವಾರ, ಸೆಪ್ಟೆಂಬರ್ 16, 2019
22 °C

ಮೋದಿ ಹೇಳಿಕೆಗೆ ಶ್ರೀನಿವಾಸಪ್ರಸಾದ್‌ ಆಕ್ಷೇಪ

Published:
Updated:
Prajavani

ಮೈಸೂರು: ‘ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಭ್ರಷ್ಟಾಚಾರದ ಆರೋಪ ಹೊತ್ತು ಸತ್ತರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಬಾರದಿತ್ತು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಬುಧವಾರ ಆಕ್ಷೇಪ ವ್ಯಕ್ತಪಡಿಸಿದರು.

‘ರಾಜೀವ್‌ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ಮೋದಿ ಹೀಗೆ ಮಾತನಾಡಬಾರದಿತ್ತು. ಅವರ ಹೇಳಿಕೆಗೆ ನನ್ನ ವಿರೋಧವಿದೆ. ಈ ಮಾತನ್ನು ದೇಶದ ಯಾರೂ ಒಪ್ಪುವುದಿಲ್ಲ’ ಎಂದರು.

‘ರಾಜೀವ್ ಸಣ್ಣ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ನಿಭಾಯಿಸಿದವರು. ಅವರ ಕುರಿತು ಅಟಲ್‌ ಬಿಹಾರಿ ವಾಜಪೇಯಿ ಕೂಡ ಒಳ್ಳೆಯ ಮಾತು ಆಡಿದ್ದರು. ರಾಜೀವ್ ದೇಶಕ್ಕಾಗಿ ಪ್ರಾಣ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

Post Comments (+)