ಮಂಚನಬಲೆ ಪುಷ್ಕರಣಿಗೆ ಹೊಸ ರೂಪ

ಶನಿವಾರ, ಮೇ 25, 2019
33 °C
ತಾಲ್ಲೂಕು ಆಡಳಿತ, ಮಂಚನಬಲೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಶ್ರಮದಾನ

ಮಂಚನಬಲೆ ಪುಷ್ಕರಣಿಗೆ ಹೊಸ ರೂಪ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆ ಗ್ರಾಮದ ಗುಂಡುತೋಪು ಬಳಿಯ ಪುರಾತನ ಪುಷ್ಕರಣಿಯನ್ನು ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿ ಶುಕ್ರವಾರ ಸ್ವಚ್ಛಗೊಳಿಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಪ್ಪ, ‘ನಮ್ಮ ಪೂರ್ವಿಕರು ಹಿಂದೆ ಪುಷ್ಕರಣಿಗಳನ್ನು ನಿರ್ಮಿಸುವ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಂತಹ ಮಹದುಪಕಾರದ ಕೆಲಸ ಮಾಡುತ್ತಿದ್ದರು. ಆದರೆ ಇವತ್ತು ನಿರ್ಲಕ್ಷ್ಯದಿಂದಾಗಿ ಪುಷ್ಕರಣಿಗಳು ಪಾಳು ಬಿದ್ದಿದ್ದು, ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

‘ತಾಲ್ಲೂಕು ಆಡಳಿತ, ಮಂಚನಬಲೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸಾರ್ವಜನಿಕರ ಶ್ರಮದ ಫಲವಾಗಿ ಪುಷ್ಕರಣಿ ಸ್ವಚ್ಛಗೊಂಡು ಇತಿಹಾಸದ ಗತವೈಭವದ ನೆನಪನ್ನು ಮರುಕಳಿಸುತ್ತಿದೆ ದಾರಿಹೋಕರನ್ನು ಹಾಗೂ ಸುತ್ತಲಿನ ಹಳ್ಳಿಗಳ ನೂರಾರು ಜನರನ್ನು ಆಕರ್ಷಿಸುವಂತಾಗಿದೆ’ ಎಂದರು.

ಮಂಚನಬಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ‘ಐತಿಹಾಸಿಕ ಪುಷ್ಕರಣಿಗಳು ಹಾಗೂ ಪುರಾತನ ಕಾಲುವೆಗಳು ಸ್ವಚ್ಛ ಮಾಡುವುದರಿಂದ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳಬಹುದು. ಜತೆಗೆ ಜಿಲ್ಲೆಯಲ್ಲಿ ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟ ಹೆಚ್ಚಿಸಬಹುದಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !