ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಪಾಂಡವಪುರ: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಕುದುರೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಪಟ್ಟಣದ ಲಾಲ್‌ಬಹದ್ದೂರ್‌ ಚಿತ್ರಮಂದಿರದ ಮುಂಭಾಗ ಶನಿವಾರ ನಸುಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕುದುರೆಗೆ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಸ್ಥಳದಲ್ಲೇ ಮೃತಪಟ್ಟಿದೆ.

ಬೆಳಿಗ್ಗೆ 5.45ರಲ್ಲಿ ಮೈಸೂರು ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಕುದುರೆಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡ ಕುದುರೆ ಸ್ಥಳದಲ್ಲೇ ಮೃತಪಟ್ಟಿದೆ. ವಿದ್ಯುತ್‌ ಕಂಬವೂ ಮುರಿದು ಬಿದ್ದಿದೆ.

ಘಟನೆಯ ನಂತರ ಕುದುರೆ ಮಾಲೀಕ ಚಿಕ್ಕಾಡೆ ಗಂಗಾ, ಪುರಸಭೆ ಅಧಿಕಾರಿಗಳು ಹಾಗೂ
ಸಾರಿಗೆ ಬಸ್‌ ಚಾಲಕನ ನಡುವೆ ಸಂದಾನ ಏರ್ಪಟ್ಟಿದೆ. ಕುದುರೆ ಮಾಲೀಕನಿಗೆ ₹ 7 ಸಾವಿರ, ವಿದ್ಯುತ್‌ ಕಂಬ ಮುರಿದ ಕಾರಣ ಪುರಸಭೆಗೆ ₹ 7 ಸಾವಿರ ಹಣವನ್ನು ಚಾಲಕ ವೈಯಕ್ತಿಕವಾಗಿ ಭರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು