ಸೋಮವಾರ, ಸೆಪ್ಟೆಂಬರ್ 16, 2019
29 °C

ಮತಹಾಕದ ದಿಗ್ವಿಜಯ್‌: ಬಿಜೆಪಿ ಲೇವಡಿ

Published:
Updated:
Prajavani

ಭೋಪಾಲ್: ಭೋಪಾಲ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್ ಅವರು ಮತದಾನ ಮಾಡಿಲ್ಲ. ಸೋಲುವ ಭಯವಿದ್ದ ಕಾರಣ ಅವರು ಮತದಾನದ ದಿನವೂ ತಾವು ಅಭ್ಯರ್ಥಿಯಾಗಿರುವ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು ಎಂದು ಮಧ್ಯಪ್ರದೇಶ ಬಿಜೆಪಿ ಲೇವಡಿ ಮಾಡಿದೆ.

ದಿಗ್ವಿಜಯ್‌ ಅವರು ಭಾನುವಾರವಿಡೀ ಭೋಪಾಲ್‌ನಲ್ಲೇ ಇದ್ದರು. ಭೋಪಾಲ್‌ನಿಂದ 140 ಕಿ.ಮೀ. ದೂರದಲ್ಲಿರುವ ರಾಘವಗಡದಲ್ಲಿ ಅವರು ಮತದಾನದ ಹಕ್ಕು ಹೊಂದಿದ್ದಾರೆ. ಇಡೀ ದಿನ ಭೋಪಾಲ್‌ನಲ್ಲೇ ಇದ್ದುದ್ದರಿಂದ ಅವರು ಮತ ಚಲಾಯಿಸಿಲ್ಲ. ಇದನ್ನು ಬಳಸಿಕೊಂಡು ದಿಗ್ವಿಜಯ್‌ ಅವರನ್ನು ಬಿಜೆಪಿ ಲೇವಡಿ ಮಾಡಿದೆ.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ನಮ್ಮ ಅಭ್ಯರ್ಥಿ ಸಾಧ್ವಿಗೆ ಬೆದರಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿಯೇ ಅವರು ಭೋಪಾಲ್‌ನಲ್ಲೇ ಇದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Post Comments (+)