ಸೋಮವಾರ, ಸೆಪ್ಟೆಂಬರ್ 16, 2019
21 °C

ಮತಗಟ್ಟೆಗೆ ವಿದೇಶಿಯರು

Published:
Updated:

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ಲೋಕಸಭೆ ಮತದಾನದ ಪ್ರಕ್ರಿಯೆಯನ್ನು 18ಕ್ಕೂ ದೇಶಗಳ ಪ್ರತಿನಿಧಿಗಳು ವೀಕ್ಷಿಸಿದ್ದಾರೆ. 

ದೆಹಲಿಯ 12 ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಜತೆಗೆ ಚರ್ಚೆ ನಡೆಸಿರುವುದಾಗಿ ರಷ್ಯಾದ ಚುನಾವಣಾ ಆಯೋಗದ ಸದಸ್ಯ ಇ.ಎ. ಷೆವ್‌ಶೆಂಕೊ ಹೇಳಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ತಮಗೆ ಹೆಚ್ಚಿನ ಕುತೂಹಲ ಇದೆ ಎಂದೂ ಅವರು ತಿಳಿಸಿದ್ದಾರೆ. 

ರಷ್ಯಾದಲ್ಲಿಯೂ ಮತಯಂತ್ರಗಳ ಬಳಕೆ ಇದೆ. ತಮ್ಮಲ್ಲಿ ಪಾಸ್‌ಪೋರ್ಟ್‌ ಅನ್ನೇ ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ ಎಂದು ಅವರು ಹೇಳಿದರು. 

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಯುವಾಗ ವಿದೇಶಿ ಪ್ರತಿನಿಧಿಗಳು ಬರುವುದು ಸಾಮಾನ್ಯ ಎಂದು ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Post Comments (+)