ಶನಿವಾರ, ಮೇ 21, 2022
26 °C

ಉತ್ತರ ಸಿರಿಯಾದಲ್ಲೀಗಸಾಂಸ್ಕೃತಿಕ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಖ್ಖಾ: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಹಿಡಿತದಿಂದ ಮುಕ್ತವಾದ ಒಂದೂವರೆ ವರ್ಷದ ಬಳಿಕ ಸಿರಿಯಾದಲ್ಲಿ ಈಗ ಪುನಃ ಸಾಂಸ್ಕೃತಿಕ ವಾತಾವರಣ ಕಂಡುಬರುತ್ತಿದೆ.

ನಾಲ್ಕೂವರೆ ವರ್ಷ ಸಿರಿಯಾವನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಜಿಹಾದಿಗಳು ಸಂಗೀತ, ಕಲೆ ಎಲ್ಲಕ್ಕೂ ನಿಷೇಧ ಹೇರಿದ್ದರು. ಇದೀಗ ರಖ್ಖಾ ಪಟ್ಟಣದಲ್ಲಿ ಹೊಸ ಸಾಂಸ್ಕೃತಿಕ ಕೇಂದ್ರ ನಿರ್ಮಾಣವಾಗಿದೆ. 

ಕಲಾಕೃತಿಗಳು, ಆವರಣದಲ್ಲಿ ಇರಿಸಿರುವ ವಿವಿಧ ಪ್ರತಿಮೆಗಳು, ದೀಪಗಳಿಂದ ಅಲಂಕೃತಗೊಂಡಿರುವ ಸಭಾಂಗಣ ಇವುಗಳಿಂದ ಸಾಂಸ್ಕೃತಿಕ ಕಲಾಕೇಂದ್ರ ಕಂಗೊಳಿಸುತ್ತಿತ್ತು. 

ಸಭಾಂಗಣದಲ್ಲಿ ಸಂಗೀತ ಕಛೇರಿ ನೀಡಿದ ಮಲಕ್–ಅಲ್–ಯತಿಮ್, ‘ಉಗ್ರರು ನನ್ನ ಸಂಗೀತ ಉಪಕರಣಗಳನ್ನು ನಾಶ ಮಾಡಿದ್ದರು ಮತ್ತು ಹಾಡದಂತೆ ನಿಷೇಧ ಹೇರಿದ್ದರು. ಪಂಜರದಲ್ಲಿದ್ದ ಪಕ್ಷಿಯಂತಾಗಿತ್ತು ನಮ್ಮ ಸ್ಥಿತಿ. ಈಗ ಸ್ವಚ್ಛಂದ ಆಕಾಶದಲ್ಲಿ ಹಾರುತ್ತಿರುವ ಪಕ್ಷಿ
ಯಂತೆ ಅನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.  ‘ಕೊನೆಗೂ ಹಾಡು, ಪದ್ಯ ಕೇಳುವ ಅವಕಾಶ ದೊರಕಿದೆ’ ಎಂದು ರಖ್ಖಾ ವಾಸಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. 

ಉಗ್ರರ ಆಕ್ರಮಣಕ್ಕೂ ಮೊದಲು ದೇಶದಲ್ಲಿ 20ಕ್ಕೂ ಹೆಚ್ಚು ಸಾಂಸ್ಕೃತಿಕ ಕೇಂದ್ರಗಳಿದ್ದವು ಹಾಗೂ 60 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿನ ಗ್ರಂಥಾಲಯಗಳಲ್ಲಿದ್ದವು. ಉಗ್ರರು ಈ ಕೇಂದ್ರಗಳನ್ನು ಮುಚ್ಚಿಸಿ, ಪುಸ್ತಕಗಳನ್ನು ಸುಟ್ಟುಹಾಕಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು