ಹುಳಿಯಾರು: ಮೇವು ವಿತರಣೆ

ಶುಕ್ರವಾರ, ಮೇ 24, 2019
29 °C

ಹುಳಿಯಾರು: ಮೇವು ವಿತರಣೆ

Published:
Updated:
Prajavani

ಹುಳಿಯಾರು: ಪಟ್ಟಣದ ಎಪಿಎಂಸಿಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕ್‌ನಿಂದ ಪಶುಪಾಲಕರಿಗೆ ಸೋಮವಾರ ತಹಶೀಲ್ದಾರ್ ತೇಜಸ್ವಿನಿ ಮೇವು ವಿತರಣೆ ಮಾಡಿದರು.

ನಂತರ ಮಾತನಾಡಿ, ಪ್ರತಿದಿನ ನೋಂದಾಯಿತ 30 ರೈತರಿಗೆ ಮೇವು ವಿತರಣೆ ಮಾಡಲಾಗುತ್ತದೆ. ಒಮ್ಮೆ ಪ್ರತಿ ರೈತರಿಗೆ 15 ದಿನದ ಮೇವನ್ನು ನೀಡಲಾಗುವುದು. ಪ್ರತಿ ರಾಸಿಗೆ 75 ಕೆ.ಜಿ.ಮೇವು ನೀಡುವುದರಿಂದ ರೈತರು ಪದೇ ಪದೇ ಬರುವುದು ತಪ್ಪುತ್ತದೆ ಎಂದು ಹೇಳಿದರು.

15 ದಿನ ಮುಗಿದ ಬಳಿಕ ಮತ್ತೆ ಮೇವು ಪಡೆಯಬಹುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವು ವಿತರಣಾ ಕಾರ್ಯ ನಡೆಯಲಿವೆ. ಹಂತ ಹಂತವಾಗಿ ಈ ಕೆಲಸ ನಡೆಯಲಿದೆ ಎಂದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪುಟ್ಟರಾಜು, ಹುಳಿಯಾರು ಪಶು ಆಸ್ಪತ್ರೆ ವೈದ್ಯ ಮಂಜುನಾಥ್, ಪಶು ಚಿಕಿತ್ಸಕ ಜಿ.ವೆಂಕಟಪ್ಪ, ಕಂದಾಯ ತನಿಖಾಧಿಕಾರಿ ಮಂಜುನಾಥ್ ಹಾಗೂ ರೈತರು ಹಾಜರಿದ್ದರು. ಯಳನಡು ಗ್ರಾಮದಲ್ಲೂ ಮೇವು ವಿತರಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !