ಭಾನುವಾರ, ಸೆಪ್ಟೆಂಬರ್ 22, 2019
21 °C

ಟ್ರಂಪ್‌ ಒಡೆತನದ ರೆಸಾರ್ಟ್‌ ಬಳಿ ಗುಂಡಿನ ದಾಳಿ

Published:
Updated:

ಸನ್ನಿ ಐಲ್ಸ್ ಬೀಚ್: ಫ್ಲಾರಿಡಾದಲ್ಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಲೀಕತ್ವದ ರೆಸಾರ್ಟ್‌ ಸಮೀಪ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 

ಮೊಹಮ್ಮದ್‌ ಜ್ರಾದಿ(43) ಮೃತ ವ್ಯಕ್ತಿ. 19 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕನಿಗೆ ಗುಂಡು ತಗುಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. 

ಘಟನೆಯಲ್ಲಿ ಹಲವು ವಾಹನಗಳು ಹಾನಿಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಹಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Post Comments (+)