ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಶಿಕಾರಿಪುರ ಪುರಸಭೆ: 30 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ 

Published:
Updated:
Prajavani

ಶಿಕಾರಿಪುರ: ಪುರಸಭೆ ಚುನಾವಣಾ ಕಣ ರಂಗೇರಿದ್ದು, ಬುಧವಾರ 30 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು.

1ನೇ ವಾರ್ಡ್‌ಗೆ ಸೈಯದ್‌ಪೀರ್ (ಬಿಜೆಪಿ), ಜಿ. ಮಾಲತೇಶ (ಪಕ್ಷೇತರ). 2ನೇ ವಾರ್ಡ್‌ಗೆ ಚಾರಗಲ್ಲಿ ಪರಶುರಾಮ್‌ (ಬಿಜೆಪಿ), ಶಿವಕುಮಾರ ಕೋರಿ (‌ಪಕ್ಷೇತರ), 4ನೇ ವಾರ್ಡ್‌ಗೆ ಎ.ಬಿ.ಸಿದ್ದಲಿಂಗಪ್ಪ (ಜೆಡಿಎಸ್‌), ಎಚ್.ವಿ. ದೇವರಾಜ್‌ (ಪಕ್ಷೇತರ), 6ನೇ ವಾರ್ಡ್‌ಗೆ ಗುರುರಾಜ್‌ರಾವ್‌ ಜಗತಾಪ್ (ಬಿಜೆಪಿ), ಪಿ.ರಾಮಚಂದ್ರರಾವ್‌ ಜಾಧವ್‌ (ಪಕ್ಷೇತರ). 7ನೇ ವಾರ್ಡ್‌ಗೆ ಎಂ.ಎಸ್‌. ರೂಪಾ ಮಂಜುನಾಥ್‌ (ಬಿಜೆಪಿ). 8ನೇ ವಾರ್ಡ್‌ಗೆ ಫಯಾಜ್‌ ಆಹಮದ್‌ (ಬಿಜೆಪಿ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

9ನೇ ವಾರ್ಡ್‌ಗೆ ಕೆ.ಎಸ್‌.ಹುಚ್ಚರಾಯಪ್ಪ (ಬಿಜೆಪಿ). 10ನೇ ವಾರ್ಡ್‌ಗೆ ಹುಲ್ಮಾರ್‌ ಮಹೇಶ್‌ (ಕಾಂಗ್ರೆಸ್‌). 12ನೇ ವಾರ್ಡ್‌ಗೆ ಟಿ.ಎಂ.ಲಕ್ಷ್ಮಿ (ಬಿಜೆಪಿ). 13ನೇ ವಾರ್ಡ್‌ಗೆ ಫೈರೋಜಾಬಾನು (ಬಿಜೆಪಿ). 14ನೇ ವಾರ್ಡ್‌ಗೆ ಎಚ್‌.ಆರ್‌. ಶ್ವೇತಾ ರವೀಂದ್ರ(ಕಾಂಗ್ರೆಸ್‌). 15ನೇ ವಾರ್ಡ್‌ಗೆ ಎನ್‌. ಬಾಲಕೃಷ್ಣ ಜೋಯಿಸ್‌ (ಬಿಜೆಪಿ), ಮಯೂರ್‌ದರ್ಶನ್‌ (ಕಾಂಗ್ರೆಸ್‌), ರಮೇಶ್‌(ಪಕ್ಷೇತರ), ಹೇಮಂತಕುಮಾರ್ (ಪಕ್ಷೇತರ). 16ನೇ ವಾರ್ಡ್‌ಗೆ ಅನಿತಾ (ಬಿಜೆಪಿ), ನಾಗೀನ್‌ತಾಜ್‌ (ಕಾಂಗ್ರೆಸ್‌), ಶಾಂತಲಾ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

17ನೇ ವಾರ್ಡ್‌ಗೆ ಕೆ.ಜಿ.ವಸಂತಗೌಡ್ರು (ಬಿಜೆಪಿ), ಎಸ್‌.ಪಿ.ನಾಗರಾಜ್‌ಗೌಡ (ಕಾಂಗ್ರೆಸ್‌), ಬಿ.ಪಿ. ಉಮೇಶ್‌ (ಪಕ್ಷೇತರ). 19ನೇ ವಾರ್ಡ್‌ಗೆ ರೂಪಕಲಾ ಎಸ್‌. ಹೆಗಡೆ (ಬಿಜೆಪಿ), ಪ್ರಭಾವತಿ (ಜೆಡಿಎಸ್‌). 20ನೇ ವಾರ್ಡ್‌ಗೆ ಅನಿತಾ (ಬಿಜೆಪಿ). 21ನೇ ವಾರ್ಡ್‌ಗೆ ಕುಶಿರಾಜ್‌ (ಬಿಜೆಪಿ). 22ನೇ ವಾರ್ಡ್‌ಗೆ ಕಮಲಮ್ಮ ಹುಲ್ಮಾರ್‌ (ಕಾಂಗ್ರೆಸ್‌) ನಾಮಪತ್ರ ಸಲ್ಲಿಸಿದ್ದಾರೆ.

Post Comments (+)