ಸೋಮವಾರ, ಸೆಪ್ಟೆಂಬರ್ 16, 2019
24 °C

1 ಕೆ.ಜಿ. ಚಿನ್ನ ವಶ: ಒಬ್ಬನ ಬಂಧನ

Published:
Updated:

ಮಂಗಳೂರು: ಮಿಕ್ಸಿಯ ಮೋಟಾರ್‌ನೊಳಗೆ ಚಿನ್ನವನ್ನು ಅಡಗಿಸಿಟ್ಟುಕೊಂಡು ವಿದೇಶದಿಂದ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಪ್ರಯಾಣಿಕನೊಬ್ಬನನ್ನು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, 1 ಕೆ.ಜಿ. 52 ಗ್ರಾಂ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

‘ದುಬೈನಿಂದ ಹೊರಟು ಮಂಗಳವಾರ ಸಂಜೆ 6.49ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸ್ಪೈಸ್‌ ಜೆಟ್‌ ಎಸ್‌ಜಿ 60 ವಿಮಾನದಲ್ಲಿ ಬಂದಿದ್ದ ಪ್ರಯಾಣಿಕ ನಿಕಾಯ್‌ ಹೆಸರಿನ ಮಿಕ್ಸಿಯಲ್ಲಿ ಚಿನ್ನ ಅಡಗಿಸಿಟ್ಟು ತಂದಿದ್ದ. ತೀವ್ರ ತಪಾಸಣೆ ನಡೆಸಿದಾಗ ಮಿಕ್ಸಿಯ ಮೋಟಾರ್‌ನಲ್ಲಿ ಎರಡು ಚಿನ್ನದ ತುಂಡುಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಯಿತು’ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ 1 ಕೆ.ಜಿ. 52 ಗ್ರಾಂ. ಚಿನ್ನದ ಮಾರುಕಟ್ಟೆ ಬೆಲೆ 34.75 ಲಕ್ಷ. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Post Comments (+)