ಭಾನುವಾರ, ಸೆಪ್ಟೆಂಬರ್ 22, 2019
22 °C

‘ಮೋದಿಯವರೇ ಚರ್ಚೆಯ ಸ್ಥಳವನ್ನು ನೀವೇ ನಿರ್ಧರಿಸಿ’: ಮತ್ತೆ ಸವಾಲು ಎಸೆದ ರಾಹುಲ್

Published:
Updated:

ನವದೆಹಲಿ: ‘ಮೋದಿಯವರೇ ಚರ್ಚೆಯನ್ನು ನಿಮ್ಮ ಗೃಹ ಕಚೇರಿಯಲ್ಲಿ ನಡೆಸುವುದೋ ಅಥವಾ ಸಂಸತ್ ಭವನದಲ್ಲಿ ನಡೆಸುವುದೋ ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಸವಾಲು ಹಾಕಿದ್ದಾರೆ.

‘ಚರ್ಚೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ನಾನು ಸವಾಲು ಹಾಕುತ್ತಲೇ ಇದ್ದೇನೆ. ಚರ್ಚೆ ಎಲ್ಲಿಯೇ ನಡೆದರು ನನಗೆ ಅಭ್ಯಂತರವಿಲ್ಲ. ನಾನು ಕೇವಲ 15 ನಿಮಿಷ ಮಾತನಾಡುತ್ತೇನೆ. ಅವರು ಮೂರು ತಾಸು ಮಾತನಾಡಲಿ. ಆದರೆ ನನ್ನ 15 ನಿಮಿಷದ ಮಾತಿನಲ್ಲೇ ಮೋದಿಗೆ ಮುಖಭಂಗವಾಗಲಿದೆ. ಏಕೆಂದರೆ ಅವರು ನನ್ನೊಂದಿಗೆ ಮಾತನಾಡಲು ಹೆದರಿದ್ದಾರೆ’ ಎಂದು ರಾಹುಲ್ ಗಾಂಧಿ ಅವರು ಲೇವಡಿ ಮಾಡಿದ್ದಾರೆ. ಪಂಜಾಬ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿ ಒಂದರಲ್ಲಿ ಅವರು ಈ ಮಾತು ಹೇಳಿದ್ದಾರೆ.

ರಫೇಲ್ ಒಪ್ಪಂದ, ನೋಟು ರದ್ಧತಿ, ಜಿಎಸ್‌ಟಿ ಮತ್ತು ನಿರುದ್ಯೋಗ ಸಮಸ್ಯೆ ಕುರಿತು ಚರ್ಚೆಗೆ ಬರುವಂತೆ ರಾಹುಲ್ ಅವರು ಮೋದಿ ಅವರಿಗೆ ಈ ಹಿಂದೆಯೂ ಹಲವು ಬಾರಿ ಸವಾಲು ಹಾಕಿದ್ದರು.

Post Comments (+)