ಮಂಗಳವಾರ, ಸೆಪ್ಟೆಂಬರ್ 21, 2021
21 °C
ಮುಂಗಾರು ಮಳೆಗೆ ಚುರುಕು ಪಡೆಯುವ ಸಾಧ್ಯತೆ

ರಾಜ್ಯಕ್ಕೆ ಡೆಂಗಿ ಜ್ವರ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಚ್‌1ಎನ್‌1 ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ಮುಂಗಾರು ಮಳೆ ಡೆಂಗಿ ಜ್ವರವನ್ನು ಹೊತ್ತು ತರುವ ಭೀತಿ ಆರಂಭವಾಗಿದ್ದು, ಐದು ವರ್ಷಗಳಲ್ಲಿ ಡೆಂಗಿ ಜ್ವರದಿಂದ 34 ಜನರು ಮೃತಪಟ್ಟಿದ್ದಾರೆ. 

‘ಈಡೀಸ್’ ಜಾತಿಯ ಸೋಂಕಿತ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಡೆಂಗಿ ಹರಡಲಿದೆ. ಮನೆಯ ಒಳಗಡೆ ಹಾಗೂ ಹೊರಗಡೆಯ ಪ್ರದೇಶದಲ್ಲಿ ನೀರಿನ ಶೇಖರಣೆ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಸೋಂಕಿತ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗಿ ನಿಯಂತ್ರಣಕ್ಕೆ ವಿವಿಧ ಜಾಗೃತಿ
ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಜ್ವರಕ್ಕೆ ಒಳಪಡುವವರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಮುಂಗಾರು ಮಳೆ ಪ್ರವೇಶಿಸಿದ ಬಳಿಕ ಸೋಂಕು ಹರಡುವಿಕೆ ಹೆಚ್ಚಾಗಲಿದೆ. ದೇಶದಾದ್ಯಂತ ಮೇ 16ರಂದು ‘ರಾಷ್ಟ್ರೀಯ ಡೆಂಗಿ’ ದಿನವನ್ನು ಆಚರಿಸಲಾಗುತ್ತದೆ. 

ಈ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣ ವರದಿಯಾಗಿದೆ. ಆದರೆ,  ಯಾವುದೇ ಸಾವು ಸಂಭವಿಸಿಲ್ಲ. ಬೆಂಗಳೂರು ನಗರ (ಬಿಬಿಎಂಪಿ–311 ), ಶಿವಮೊಗ್ಗ (104), ಯಾದಗಿರಿ (57), ಉಡುಪಿ (48), ದಕ್ಷಿಣ ಕನ್ನಡ (47) ಹಾಗೂ ಕಲಬುರ್ಗಿ (41) ಜಿಲ್ಲೆಯಲ್ಲಿ ಅಧಿಕ ಡೆಂಗಿ ಪ್ರಕರಣ ವರದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು